ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar): ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್(Sharavati Pumped Storage) ವಿರುದ್ಧ ಜನರ ಆಕ್ರೋಶ ಇನ್ನೂ ಹೆಚ್ಚಾಗಿದೆ.

ಕಳೆದ ಸೆಪ್ಟೆಂಬರ್ 18ರಂದು ಗೇರುಸೊಪ್ಪದಲ್ಲಿ ಆಯೋಜಿಸಿದ ಸಾರ್ವಜನಿಕ ಆಲಿಕೆ  ಸಭೆಯಲ್ಲಿ ಸಹಸ್ರಾರು ಸಂಖ್ಯೆಯ ನಾಗರಿಕರು ವಿರೋಧಿಸಿ ತಮ್ಮ ಮನವಿ ಸಲ್ಲಿಸಿದ್ದರು. ಸಭೆಯ ಆರಂಭದಿಂದ ಅಂತ್ಯದವರೆಗೂ ಉಪಸ್ಥಿತರಿದ್ದ ಅಧಿಕಾರಿಗಳು ವಿರೋಧದ ಧ್ವನಿಯನ್ನು  ಕೇಳಬೇಕಾಯಿತು. ಯೋಜನೆ ಜಾರಿಯಾದರೆ ಆಗುವ ಸಮಸ್ಯೆಗಳ ಬಗ್ಗೆ ಬಿಡಿಬಿಡಿಯಾಗಿ ಜನತೆ ಹೇಳಿದ್ದರು. ಇದೀಗ ಯುವ ಸಮುದಾಯ ಮತ್ತೊಂದು ಅಭಿಯಾನಕ್ಕೆ ಮುಂದಾಗಿದೆ.

ಶರಾವತಿ ಪಂಪ್ಡ್ ಸ್ಟೋರೇಜ್(Sharavati Pumped Storage) ಯೋಜನೆ ವಿರುದ್ಧ ಯುವ ಸಮುದಾಯ ಒಗ್ಗೂಡಿ   ಸಾಮಾಜಿಕ ಜಾಲತಾಣಗಳಲ್ಲಿ(Social Media) ಅಭಿಯಾನ ನಡೆಸಲು ಸಿದ್ದತೆ ನಡೆಸಿದೆ.  ಶರಾವತಿ ನದಿಯ ಉಳಿವಿಗಾಗಿ ಜಾಗತಿಕ ಮಟ್ಟದಲ್ಲಿ ತಮ್ಮ ವಿರೋಧದ ಧ್ವನಿ ಮೊಳಗಿಸಲು ಎಕ್ಸ್ ಅಭಿಯಾನ ನಡೆಸಲಾಗುತ್ತಿದೆ.

ದೇಶ ಮಟ್ಟದಲ್ಲಿ ಜನಜಾಗೃತಿ ಮೂಡಿಸಲು ಅತಿ ಶೀಘ್ರದಲ್ಲೇ ‘ಎಕ್ಸ್’ ಅಭಿಯಾನ ಹಮ್ಮಿಕೊಳ್ಳಲು ಯುವಕರ ತಂಡ ಸಿದ್ದತೆ ನಡೆಸಿದೆ.  ಶರಾವತಿ ನದಿಗೆ(Sharavati River) ಆಗುತ್ತಿರುವ ಅನ್ಯಾಯ ಹಾಗೂ ಜನರಿಗೆ ಆಗುವ ತೊಂದರೆಗಳ ಬಗ್ಗೆ ಜಗತ್ತಿಗೆ ತಿಳಿಯಬೇಕು. ಇಂತಹ ಯೋಜನೆ ಮಾಡಿದರೆ ಆಗುವ ಅಪಾಯ ಅರಿತುಕೊಳ್ಳಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ.

#STOPSHARAVATIPUMPEDSTORAGE ಮತ್ತು #SAVE SHARAVTI ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಈ ಆಂದೋಲನೆ ಬೆಂಬಲಿಸೋಣ ಎಂದು ಯುವಕರ ತಂಡ ಕರೆಯನ್ನು ನೀಡುತ್ತಿದೆ. ಶರಾವತಿ ನದಿಯ ಉಳಿವಿಗಾಗಿ ಮತ್ತು ಇದೀಗ ಎದ್ದಿರುವ ವಿರೋಧದ ಅಲೆಯಲ್ಲಿಯೇ ಯೋಜನೆ ಕೈಬಿಡಬೇಕೆಂಬ  ಗುರಿಯನ್ನು ಯುವ ಸಮುದಾಯ ಹೊಂದಿದೆ. ಹೀಗಾಗಿ ಶರಾವತಿ ಪಂಪ್ಡ್ ‌ಸ್ಡೋರೇಜ್ ಯೋಜನೆ ಸರ್ಕಾರ ಕೈಬಿಟ್ಟರೇ ಒಳಿತಲ್ಲವೇ.

ಇದನ್ನು ಓದಿ : ಮುಕಳೆಪ್ಪ ಲವ್ ಮ್ಯಾರೇಜ್ ಪ್ರಕರಣಕ್ಕೆ ಟ್ವಿಸ್ಟ್. ತಾಯಿಯ ವಿರುದ್ಧವೇ ಮಗಳ ಹೇಳಿಕೆ

ಮೋದಿ ಅವರ  ಭಾಷಣ  ರಾಜಕೀಯ ನಾಟಕ.‌ ಜನರ ಗಮನ ಬೇರೆಡೆ ಸೆಳೆಯುವ ಯತ್ನ – ಸೂರಜ್ ನಾಯ್ಕ ಆರೋಪ

ಆತ್ಮ ನಿರ್ಭರತೆಯೊಂದಿಗೆ ಸಾಗುತ್ತಿರುವ ಭಾರತ. ಸ್ವದೇಶಿ ವಸ್ತು ಬಳಕೆಗೆ ಮೋದಿ ಕರೆ.