ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಆಂಧ್ರಪ್ರದೇಶ(Andrapradesh): ಇಂದಿನ ಆಧುನಿಕ ಜಗತ್ತಿನಲ್ಲಿ ತಾಂತ್ರಿಕತೆ ಬೆಳೆಯುತ್ತಿದ್ದಂತೆ ಯಾರ ಸಂಬಂಧ ಎಲ್ಲೆಲ್ಲಿ ಬೆಳೆಯುತ್ತೋ ಗೊತ್ತಿಲ್ಲ. ಇಂಟರ್ನೆಟ್ ಜಮಾನದಲ್ಲಿ ಹೇಗೆ ಬೇಕಾದ್ರೂ ಲವ್(Love) ಆಗಬಹುದು.
ಆನ್ಲೈನ್ನಲ್ಲಿ(Online) ಯುವಕನ ಪ್ರೇಮಕ್ಕೆ ಮರುಳಾದ ಅಮೆರಿಕನ್ ಯುವತಿಯೊಬ್ಬಳು ಆತನಿಗಾಗಿ ತನ್ನ ದೇಶ ಬಿಟ್ಟು ಬಂದಂತಹ ಅಚ್ಚರಿಯ ಘಟನೆ ಅಂಧ್ರಪ್ರದೇಶದಿಂದ ವರದಿಯಾಗಿದೆ.
ಮೂಲತಹ ಫೋಟೋಗ್ರಾಫರ್(Photographer) ಜಾಕ್ಲಿನ್ ಫೊರೆರೊ ಹಾಗೂ ಚಂದನ್ ಇಬ್ಬರು ಇನ್ಸ್ಟಾಗ್ರಾಮ್(Instragram) ಪ್ರೊಫೈಲ್ ನೋಡಿ ಪ್ರೀತಿ ಮಾಡಲು ಶುರು ಮಾಡಿದ್ದರು.
ಇವರ ಹಾಯ್ ಎಂಬ ಸಂದೇಶದಿಂದ ಶುರುವಾದ ಪ್ರೀತಿ ಈಗ ಮದುವೆ ಆಗುವ ತನಕ ಬಂದು ನಿಂತಿದೆ. ಈ ಬಗ್ಗೆ ಖುದ್ದು ಅಮೆರಿಕಾದ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಫೊರೆರೊ 14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕೇವಲ 45 ಸೆಕೆಂಡುಗಳ ಕ್ಲಿಪ್ನಲ್ಲಿ ಈ ಇಬ್ಬರ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗೆ ಮರೆಯಲಾರದ ಬಂಧನವಾಗಿ ಬದಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಈ ಇಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನು ಓದಿ : ಬಾವಿ ಅತ್ತೆಯೊಂದಿಗೆ ಓಡಿ ಹೋದ ಅಳಿಯ. ವಧುವಿನ ಕುಟುಂಬದವರು ಕಂಗಾಲು.
ಯಾಸಿನ್ ಭಟ್ಕಳ್ ಸೇರಿ ಐವರಿಗೆ ಮರಣ ದಂಡನೆ ಫಿಕ್ಸ್. ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್.