ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) :  ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ   ರೆಡ್  ಅಲರ್ಟ್(Red Alert) ಇರುವುದರಿಂದ  ಜಿಲ್ಲೆಯ ಕರಾವಳಿಯ  ತಾಲೂಕುಗಳ ಜೊತೆಗೆ ಜೋಯಿಡಾ ಮತ್ತು ದಾಂಡೇಲಿಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ನಾಳೆ ಮಳೆ ಹೆಚ್ಚಾಗುವ ಸಾಧ್ಯತೆಯಿರುವ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಜೋಯಿಡಾ ಮತ್ತು ದಾಂಡೇಲಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ   ರಜೆ (Holiday) ಘೋಷಿಸಲಾಗಿದೆ.

ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಮತ್ತು  ಯಾವುದೇ ಅನಾನುಕೂಲ ಹಾಗೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮೇಲಿನ ತಾಲೂಕುಗಳಿಗೆ   ಮಾತ್ರ ರಜೆ ಘೋಷಿಸಿ (Holiday Declared) ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಮಾಡಿದ್ದಾರೆ.

ಇದನ್ನು ಓದಿ : ಅರಣ್ಯದಲ್ಲಿ ಜಾನುವಾರು ನಿಷೇಧ. ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧ ಅರಣ್ಯ ಸಚಿವರ ಹೇಳಿಕೆ : ರವೀಂದ್ರ ನಾಯ್ಕ