ಉಡುಪಿ(UDUPI) : ಪತಿಯ ಸಂಬಂಧಿಕರ ಪ್ರಾಣ ಉಳಿಸಲು ಹೋಗಿ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ  ನಡೆದಿದೆ

ಕುಂದಾಪುರ(KUNDAPUR) ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) ಮೃತಪಟ್ಟವರು. ತಮ್ಮ ಪತಿಯ ಸಂಬಂಧಿಕ 69 ವರ್ಷದ ಹಿರಿಯ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದರು. ಕುಟುಂಬದಲ್ಲಿ ಯಾರ ರಕ್ತದ ಮಾದರಿಯೂ ಮ್ಯಾಚ್ ಆಗಿರಲಿಲ್ಲ.  ಕೊನೆಗೆ ಅರ್ಚನಾ ಅವರ ರಕ್ತದ ಮಾದರಿ ಹೊಂದಾಣಿಕೆಯಾಗಿತ್ತಂತೆ.  ಬೆಂಗಳೂರಿನ ಆಸ್ಪತ್ರೆಯಲ್ಲಿ 12 ದಿನಗಳ ಹಿಂದೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಅರ್ಚನಾ ಅವರ ಯಕೃತ್ತಿನ ಒಂದು ಭಾಗವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿತ್ತು

ಚೇತರಿಸಿಕೊಂಡಿದ್ದ ಅರ್ಚನಾ ಡಿಸ್ಚಾರ್ಜ್ ಆಗಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಜ್ವರ ಕಾಣಿಸಿಕೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರೆ.

ಅರ್ಚನಾ ಅವರು ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿದ್ದರು. ಅವರ ಅಕಾಲಿಕ ನಿಧನದಿಂದ ಸಂಬಂಧಿಕರು ಶೋಕ ಮಡುವುಗಟ್ಟಿದೆ. ಮೃತರು ಪತಿ, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

ಇದನ್ನು ಓದಿ : ರೈಲ್ವೆ ಹಳಿ ಪಕ್ಕದಲ್ಲಿ ಯುವಕನ ಸಾವು

ಅಜಾಗರುಕತೆ ಬೈಕ್ ರೈಡ್

ಅಂಗನವಾಡಿಗೆ ಗಟ್ಟಿ ಬೆಲ್ಲ. ಗೃಹಲಕ್ಷ್ಮಿ ನಿರಂತರ

ಬಿಸಿಲಿನ ತಾಪಕ್ಕೆ ಯುವಕ ಸಾವು