ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ಕರ್ನಾಟಕ ರಾಜ್ಯೋತ್ಸವ ಸಂಬೃಮದಲ್ಲಿದ್ದರೇ, ರಾಜ್ಯ ವಿರೋಧಿ ಪುಂಡ ಸಂಘಟನೆ ಎಂಇಎಸ್(MES) ಮುಖಂಡರೊಂದಿಗೆ ನಗೆಬೀರಿ ಸೆಲ್ಸಿ(Selphi) ಕ್ಲಿಕ್ಕಿಸಿಕೊಂಡ ಪೊಲೀಸ್ ಅಧಿಕಾರಿಯೊಬ್ಬರು ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್(Belagavi MES) ಕರಾಳ ಹೆಸರಿನ ರಾಯಲಿಯಲ್ಲಿ ಬಂದೋಬಸ್ತ್ ಗೆ ನಿಯೋಜಿತಗೊಂಡಿದ್ದ ಪೊಲೀಸ್ ಅಧಿಕಾರಿ(Police Officer) ಜೆ.ಎಂ. ಕಾಲಿಮಿರ್ಚಿ ಈಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ರಾಜ್ಯೋತ್ಸವ ಮರವಣಿಗೆ(Rajyotsav Procession) ಸಂಭೃಮವಿತ್ತು. ಇನ್ನೊಂದೆಡೆ ಎಂಇಎಸ್(MES) ಕೂಡ ತನ್ನ ಮೆರವಣಿಗೆ ನಡೆದಿದೆ. ಈ ನಡುವೆ ಸಿಪಿಐ(CPI) ಒಬ್ಬರು ದುರ್ವರ್ತನೆ ತೋರಿದ್ದಾರೆ. ರಾಜ್ಯ ಸರಕಾರ(State Government) ಹಾಗೂ ಕನ್ನಡಿಗರ ವಿರುದ್ಧ ಕಾಲು ಕೆದರಿ ಜಗಳ ತೆಗೆಯುತ್ತಿರುವ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆಗೆ ಪೊಲೀಸ್ ಅಧಿಕಾರಿಯ ಅತಿ ಸಲುಗೆಯ ಸ್ನೇಹ ಸಾರ್ವಜನಿಕವಾಗಿ ಗೊತ್ತಾಗಿದೆ. ಪೊಲೀಸ್ ಅಧಿಕಾರಿ ಜೆ. ಎಂ. ಕಾಲಿಮಿರ್ಚಿ ಅಮಾನತಿಗೆ ಕನ್ನಡ ಸಂಘಟನೆಗಳು ಆಗ್ರಹಿಸಿವೆ.
ಇದನ್ನು ಓದಿ : ಕಾರ್ತಿಕ ಏಕಾದಶಿಗೆ ಆಗಮಿಸಿದ ಭಕ್ತರು. ದೇವರ ದರ್ಶನಕ್ಕೆ ತೆರಳುವಾಗ ಕಾಲ್ತುಳಿತ. ಹತ್ತು ಭಕ್ತರ ದುರ್ಮರಣ.
ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ತಪ್ಪಿದ ಅನಾಹುತ.
ಸಂಸದ ಕಾಗೇರಿ, ಶಾಸಕ ಹೆಬ್ಬಾರ್ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ. ಶರಾವತಿ, ನದಿ ತಿರುವು ಯೋಜನೆ ಬಗ್ಗೆ ಚರ್ಚೆ.

