ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಭಾರತ ಮತ್ತು ಪಾಕಿಸ್ತಾನದ(India Pakistan) ನಡುವೆ ಯುದ್ಧದ ವಾತಾವರಣ ಮುಂದುವರಿದಿದೆ. ದೇಶದಲ್ಲಿರುವ ಪಾಕಿಸ್ತಾನಿಯರನ್ನ ದೇಶದಿಂದ ತೊಲಗಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಮಧ್ಯೆ ಪಾಕ್ ಪ್ರಜೆಯೋರ್ವ(Pak Citizen) ಕಾರವಾರಕ್ಕೆ ಆಗಮಿಸಿ ಸುದ್ದಿಯಾಗಿದ್ದಾನೆ.
ಕಾರವಾರದ ವಾಣಿಜ್ಯ ಬಂದರಿಗೆ(Karwar Commercial Port) ಆಗಮಿಸಿದ ಬಿಟುಮಿನ್ ತುಂಬಿದ ಹಡಗಿನಲ್ಲಿ ಪಾಕ್ ನಾವಿಕನೋರ್ವ ಆಗಮಿಸಿದ್ದ. ಆದರೆ ಪೊಲೀಸರು ಹಾಗೂ ಭದ್ರತಾ ಏಜೆನ್ಸಿಯವರು ಪಾಕಿಸ್ತಾನದ ವ್ಯಕ್ತಿಗೆ ಬಂದರು ಪ್ರದೇಶಕ್ಕೆ ಇಳಿಯದಂತೆ ನೋಡಿಕೊಂಡಿದ್ದಾರೆ.
ಸೋಮವಾರದಂದು ಕಾರವಾರದ ವಾಣಿಜ್ಯ ಬಂದರಿಗೆ ಎಮ್.ಟಿ. ಆರ್. ಓಶಿಯನ್ ಹೆಸರಿನ ಬಿಟುಮಿನ್ ತುಂಬಿದ ಹಡಗು ಇರಾಕ್‌ನ ಕೊಹಾರ್ ನಿಂದ ಆಗಮಿಸಿತ್ತು. ಅದರಲ್ಲಿ 12 ಭಾರತೀಯ, ಇಬ್ಬರು ಸಿರಿಯಾ ಮತ್ತು ಒಬ್ಬ ಪಾಕ್ ನಾವಿಕರಿದ್ದರು. ಆದರೆ ಸಿರಿಯಾ ಮತ್ತು ಪಾಕ್ ನಾವಿಕರ ಮೊಬೈಲ್ ನ್ನ ಹಡಗಿನ ಕ್ಯಾಪ್ಟನ್ ಮೂಲಕ ಸೀಜ್ ಮಾಡಿಡಲಾಗಿತ್ತು.
ಸೋಮವಾರ ಕಾರವಾರದ ಬಂದರಿಗೆ ಬಿಟುಮಿನ್ ತುಂಬಿರುವ ಹಡಗು ಬಂದ ಕೂಡಲೇ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು, ಗುಪ್ತಚರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ನಾವಿಕರ ಪೂರ್ವಪರ ವಿಚಾರಿಸಿದರು.
ಪಾಕಿಸ್ತಾನದ ಸಿಬ್ಬಂದಿಯೂ ಇರುವ ಮಾಹಿತಿಯನ್ನು ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ವಲಸೆ ಅಧಿಕಾರಿಗಳು ಪಡೆದಿದ್ದರು. ಸಾಮಾನ್ಯವಾಗಿ ಕಾರವಾರ ಬಂದರಿಗೆ ಯಾವುದೇ ಹಡಗು ಬಂದರೂ ಅದರಲ್ಲಿ ಇರುವ ವಿದೇಶಿ ಸಿಬ್ಬಂದಿಗಳ ಮಾಹಿತಿ ರಾಜ್ಯ ಹಾಗೂ ಕೇಂದ್ರ ಇಂಟಲಿಜೆನ್ಸ್ ಏಜೆನ್ಸಿಗಳಿಗೆ ರವಾನೆ ಮಾಡಲಾಗುತ್ತದೆ.
ಬುಧವಾರ ಬಿಟುಮಿನ್ ಖಾಲಿ ಹಡಗು ವಾಪಾಸ್ ಆಗಿದೆ ಎಂದು ಗೊತ್ತಾಗಿದೆ.
ಇದನ್ನು ಓದಿ : ಪಾಕಿಸ್ತಾನದಿಂದ ಭಾರತಕ್ಕೆ ವಾಪಾಸ್ ಆದ ಬಿಎಸ್ಎಪ್ ಯೋಧ.
ಪೊಲೀಸ್ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.
ಹಾಡುವಳ್ಳಿಯ ನಾಲ್ವರ ಕೊ ಪ್ರಕರಣ. ತಂದೆಗೆ ಜೀವಾವಧಿ. ಮಗನಿಗೆ ಮರಣ ದಂಡನೆ ಶಿಕ್ಷೆ.