ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ತಾಲೂಕಿನ ಬೆಣ್ಣೆಹೊಳೆ ಫಾಲ್ಸ್(Bennehole Falls) ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಯೋರ್ವ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ಭಾನುವಾರ ಸಂಭವಿಸಿದೆ.
ಶಿರಸಿಯ ಅರಣ್ಯ ಮಹಾವಿದ್ಯಾಲಯದ(Sirsi Forest College) ಮೂರನೇ ವರ್ಷದ ರಾಹುಲ್ ನಾಯಕ ನಾಪತ್ತೆಯಾದ ವಿದ್ಯಾರ್ಥಿಎಂದ ತಿಳಿದು ಬಂದಿದೆ. ಈತ ವಿಜಯನಗರ(Vijayanagar) ಜಿಲ್ಲೆಯ ಹೂವಿನಹಡಗಲಿ ನಿವಾಸಿ.
ನಾಲ್ವರು ವಿದ್ಯಾರ್ಥಿಗಳು ಬೆಣ್ಣೆಹೊಳೆ ಪ್ರವಾಸಕ್ಕೆ ತೆರಳಿದ್ದರು.ಇಬ್ಬರು ಕಾಲು ತೊಳೆಯುವ ಸಂದರ್ಭದಲ್ಲಿ ಜಾರಿ ಬಿದ್ದರು. ಈ ಸಂದರ್ಭದಲ್ಲಿ ಕಲ್ಲು ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದ ಶ್ರೀನಿವಾಸನ್ ಎಂಬಾತನನ್ನು ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಗ್ರಾಮಸ್ಥರ ಸಹಾಯದಿಂದ ಹಗ್ಗದಿಂದ ಬಚಾವ ಮಾಡಿದ್ದಾರೆ. ಗಾಯಗೊಂಡಿದ್ದ ಶ್ರೀನಿವಾಸನನ್ನು ಕಂಬಳಿ ಸಹಾಯದಿಂದ ಮೇಲಕ್ಕೆ ತಂದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳಕ್ಕೆ ಮಾರಿಕಾಂಬಾ ಲೈಫ್ ಗಾರ್ಡ್ ನ(Marikamba Life guard) ಗೋಪಾಲ ಗೌಡ ನೇತ್ರತ್ವದಲ್ಲಿ ಈಜು ತಜ್ಞರ ತಂಡ ಶೋಧ ನಡೆಸುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಶಿರಸಿ ಗ್ರಾಮೀಣ ಠಾಣೆ(Sirsi Rural Station) ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟದಲ್ಲಿದ್ದಾರೆ.
ಇದನ್ನು ಓದಿ : ಬೆಂಗಳೂರಿನಿಂದ ಬಂದ ಪ್ರವಾಸಿಗರು ಸಮುದ್ರ ಪಾಲು: ಮೂವರ ದುರ್ಮರಣ.
ಭಟ್ಕಳದಲ್ಲಿ ಮೆರೆದ ಮಾನವೀಯತೆ. ಮೃತ ಭಿಕ್ಷುಕನ ಅಂತ್ಯಸಂಸ್ಕಾರ.