ಶಿರಸಿ(SIRSI):  ನಗರದಿಂದ ಸಿದ್ದಾಪುರ(Siddapur), ಸಾಗರ(SAGAR) ಕಡೆ ತೆರಳುವ ಯುವತಿಯರು ಮತ್ತು ಮಹಿಳೆಯರು ಬಸ್(Bus) ಇಲ್ಲದೆ ಪರದಾಡುತ್ತಿರುವ ವಿಷಯ ಗೊತ್ತಾಗಿದೆ.

ಶಿರಸಿಯ ಹಳೆ ಬಸ್ ನಿಲ್ದಾಣದಲ್ಲಿ(Sirsi Old Bus Stand)   ಶಿರಸಿ-ಸಿದ್ದಾಪುರ ಬಸ್(Sirsi-Siddapur Bus) ಇಲ್ಲದೆ ಹಲವು  ಹೆಣ್ಣುಮಕ್ಕಳು ರಾತ್ರಿ 7-15 ಬಸ್ ಬಾರದೇ ಇರುವುದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನಸೂರು, ನಾಣಿಕಟ್ಟಾ, ಸಿದ್ದಾಪುರ ಭಾಗದವರಿಗೆ ತೊಂದರೆಯಾಗಿದೆ. ಬಸ್ ಬಗ್ಗೆ ಡಿಪೋ ಮ್ಯಾನೇಜರ್(Depot Manager)  ಬಳಿ ವಿಚಾರಿಸಿದರೆ ಬಸ್   ಬಂದಿಲ್ಲಾ ಅಂತಾ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಪ್ರತಿ ದಿನ ಸಿದ್ದಾಪುರ ಮತ್ತು ಶಿರಸಿಯ ಗ್ರಾಮೀಣ(Sirsi Rural) ಭಾಗದಿಂದ ನೂರಾರು ಹೆಣ್ಣು ಮಕ್ಕಳು ಶಿರಸಿ ನಗರಕ್ಕೆ ಕೆಲಸಕ್ಕೆಂದು ಬರುತ್ತಾರೆ. ರಾತ್ರಿ ನಾವು ಕೆಲಸ ಮುಗಿಸಿ ಊರಿಗೆ ಹೋಗಲು ತೊಂದರೆ ಪಡುವಂತಾಗಿದೆ ಎಂದು ಯುವತಿಯರು ಹೇಳಿದ್ದಾರೆ.

ಈ ಹಿಂದೆ ಯಲ್ಲಾಪುರ ಡಿಪೋದಿಂದ(Yallapur Depot) 7-45ಕ್ಕೆ ನಿತ್ಯ ಬಸ್ ಸಂಚರಿಸುತಿತ್ತು.  ಆದರೆ ಈಗ ವಾರಕ್ಕೆ ಎರಡು ಮೂರು ದಿನ ಬಸ್ ಬಂದರೆ ಬಂತು, ಇಲ್ಲದಿದ್ದರೆ ಇಲ್ಲಾ ಎಂಬಂತಾಗಿದೆ. ಹೀಗಾಗಿ ಪ್ರಯಾಣಿಕರು(Passangers) ಬಸ್ ನಿಲ್ದಾಣದಲ್ಲಿ ಭಯದಿಂದ ಕಾಲ ಕಳೆಯಬೇಕಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಗೋವು ಕಳ್ಳರ ಅಟ್ಟಹಾಸ

ಶಿರಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ

ಕಾರವಾರದಲ್ಲಿ ಅಕ್ಟೋಬರ್ 26ರಂದು ಉದ್ಯೋಗ ಮೇಳ

ಟೋಲ್ ಪ್ಲಾಜಾ ಸ್ಥಳಾಂತರಿಸುವಂತೆ ಬಡನಗೋಡು ಗ್ರಾಮಸ್ಥರ ಆಗ್ರಹ