ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ರಾಜ್ಯದ ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ(Sirsi Sri Marikamba Jaatre) ಫೆಬ್ರವರಿ 24ರಿಂದ  ಮಾರ್ಚ್ 4ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಜಾತ್ರೆಯ ದಿನಾಂಕವನ್ನು ವೇದಮೂರ್ತಿ ರಾಮಕೃಷ್ಣ ಭಟ್ಟ ಕೇರೆಕೈ ಹಾಗೂ ಶರಣ ಆಚಾರ್ಯರು ಅಧಿಕೃತವಾಗಿ ರವಿವಾರ  ಘೋಷಿಸಿದರು.

ನಗರದ ಮಾರಿಕಾಂಬಾ ದೇವಾಲಯದಲ್ಲಿ(Marikamba Temple) ನಡೆದ ಧರ್ಮದರ್ಶಿ ಮಂಡಳಿ, ಬಾಬುದಾರರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಜಾತ್ರೆಯ ದಿನಾಂಕ ನಿಗದಿಪಡಿಸಲಾಯಿತು. ಸಭೆಯಲ್ಲಿ ಶಾಸಕ ಭೀಮಣ್ಣ, ಉಪವಿಭಾಗಾಧಿಕಾರಿ ಕಾವ್ಯಾರಾಣಿ, ಡಿ.ಎಸ್.ಪಿ. ಗೀತಾ ಪಾಟೀಲ್, ಪೌರಾಯುಕ್ತ ಪ್ರಕಾಶ ಭಾಗಿ ಸೇರಿದಂತೆ ದೇವಾಲಯದ ಅರ್ಚಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅರ್ಚಕರು ಫೆಬ್ರವರಿ 3ರಿಂದ ಹೊರಬೀಡು ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಜಾತ್ರೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ತಿಳಿಸಲಾಯಿತು

ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಾಂತರ ಸಂಖ್ಯೆಯ  ಭಕ್ತಾದಿಗಳು ಆಗಮಿಸುವ  ನಿರೀಕ್ಷೆಯಿದ್ದು, ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ(MLA Bheemanna Naik) ಸೂಚನೆ ನೀಡಿದರು. ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಸಂಚಾರ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳಿಗೆ ವಿಶೇಷ ಗಮನ ನೀಡುವಂತೆ ಅವರು ಹೇಳಿದರು.

ಸಭೆಯಲ್ಲಿ ಅಧಿಕಾರಿಗಳು ಜಾತ್ರೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸುವ ಕುರಿತು ತಮ್ಮ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಶಿರಸಿ ಮಾರಿಕಾಂಬಾ ಜಾತ್ರೆ(Marikamba Jaatre) ಯಶಸ್ವಿಯಾಗಿ ನಡೆಯುವಂತೆ ಎಲ್ಲರ ಸಹಕಾರ ಅಗತ್ಯವೆಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಇದನ್ನು ಓದಿ : ಏಳು ದಿನಗಳ ಕರಾವಳಿ ಉತ್ಸವದ  ಕಾರ್ಯಕ್ರಮಗಳ ವಿಶೇಷ.

ಡಿಸೆಂಬರ್ 22ರಿಂದ ನಡೆಯುವ ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆ.

ಕೋಳಿ ಪಡೆಗೆ ಪ್ರಚೋದನೆ. ಶಾಸಕ ಸೇರಿ‌ 16 ಜನರ ಮೇಲೆ ಪ್ರಕರಣ.