ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಹಲವು ದಶಕಗಳಿಂದ ಬಾಕಿ ಇರುವ  ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ರಥ ಬೀದಿಯ ರಸ್ತೆ ಅಗಲಿಕರಣ ಯಾವಾಗ ಮಾಡುತ್ತೀರಿ ಎಂದು  ಸ್ಥಳೀಯ ಶಾಸಕರು, ಸಂಸದರು ಮತ್ತು ಅಧಿಕಾರಿಗಳನ್ನ ಶಿರಸಿ ಜನತೆ ಪ್ರಶ್ನೆ ಮಾಡಿದ್ದಾರೆ.

ಶಿರಸಿ ನಗರಸಭೆ  ಮಾಜಿ ಸದಸ್ಯರಾದ ಮಹಾದೇವ ಚಲವಾದಿ ಈ ಬಗ್ಗೆ ಧ್ವನಿ ಎತ್ತಿದ್ದು  ಇದು ನನ್ನದೊಂದೆ ಪ್ರಶ್ನೆ ಅಲ್ಲ. ಶಿರಸಿಯ ಸಮಸ್ತ ಸಾರ್ವಜನಿಕರ ಪ್ರಶ್ನೆ ಎಂದು ಹೇಳಿದ್ದಾರೆ. 

ಶಿರಸಿ ನಗರವು ದಿನದಿಂದ ದಿನಕ್ಕೆ ಆರ್ಥಿಕವಾಗಿ ವ್ಯವಹಾರಕ್ಕಾಗಿ ಬೆಳೆಯುತ್ತಿದೆ.  ಜನಸಂಖ್ಯೆ ಮತ್ತು ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿದೆ. ಈ ಹಿಂದೆಯೂ ಕೂಡ ಅಗಲೀಕರಣದ ವಿಷಯವನ್ನ  ತಾವುಗಳು ಪ್ರಸ್ತಾಪಿಸಿದ್ದೀರಿ. ಆದರೆ ಅದು ಯಾವುದು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಶ್ರೀ ಮಾರಿಕಾಂಬಾ ದೇವಸ್ಥಾನದ ರಥ ಬೀದಿ ರಸ್ತೆಗೆ 3 ಕೋಟಿ ರೂಪಾಯಿ ವಿದ್ಯುತ್ ಅಂಡರ್ ಗ್ರೌಂಡ್ ಹಾಕಲಿಕ್ಕೆ ತಮ್ಮ ಪ್ರಯತ್ನದಿಂದ ಮಂಜೂರಿ ಆಗಿದ್ದು ತಿಳಿದು ಬಂದಿದೆ. ಆದರೆ ಆ ಕೆಲಸ ಆಗುವ ಮೊದಲು ಶ್ರೀ ಮಾರಿಕಾಂಬಾ ರಥ ಬೀದಿ ರಸ್ತೆ ಅಗಲೀಕರಣ ಆಗಿದ್ದಲ್ಲಿ ಒಳ್ಳೆಯ ಕೆಲಸ ಆಗುತ್ತಿತ್ತು. ಇದು ಕೇವಲ ನನ್ನ ಅಭಿಪ್ರಾಯವಲ್ಲ ಶಿರಸಿಯ ಸಮಸ್ತ ಜನರ ಆಸೆಯೂ ಕೂಡ ಆಗಿದೆ ಎಂದು ಮಹಾದೇವ ಚಲವಾದಿ ಹೇಳಿದ್ದಾರೆ.

ಬರುವ ಶ್ರೀ ಮಾರಿಕಾಂಬಾ ಜಾತ್ರೆಯೊಳಗಡೆ ಒಂದು ಗಟ್ಟಿಯಾದ ನಿರ್ಧಾರ ತೆಗೆದುಕೊಂಡಲ್ಲಿ ತಮ್ಮ ಹೆಸರು ಯಾವಾಗಲೂ ಅಜರಾಮವಾಗಿರುತ್ತದೆ. ಕಾರಣ ಶಿರಸಿಯಲ್ಲಿ ನಡೆಯುವಂತಹ ಯುಗಾದಿ ಉತ್ಸವ, ಬೇಡರ ವೇಷ,  ಗಣೇಶೋತ್ಸವ ಸೇರಿದಂತೆ ಇನ್ನು ಅನೇಕ ಸಾಂಸ್ಕೃತಿಯ ಮೆರವಣಿಗೆಯ ಬಂಡಿಗಳು ಶ್ರೀ ಮಾರಿಕಾಂಬಾ ದೇವಸ್ಥಾನದ ಎದುರಿಗೆ ಹೋಗುವುದು ತಮಗೆಲ್ಲ ತಿಳಿದ ವಿಷಯ. ಈ ಎಲ್ಲಾ ಕಾರಣಗಳಿಂದ ಆದಷ್ಟು ಬೇಗ ತಾವುಗಳು ಅಧಿಕಾರಿಗಳ ಸಭೆ ಕರೆದು ಒಂದು ನಿರ್ಣಯ  ತೆಗೆದುಕೊಂಡಲ್ಲಿ ಶ್ರೀ ಮಾರಿಕಾಂಬಾ ಜಾತ್ರೆಗೆ ಬಂದಂತ ಭಕ್ತಾದಿಗಳಿಗೂ  ಶಿರಸಿಯ ಸಾರ್ವಜನಿಕರಿಗೂ ಹೆಮ್ಮೆಪಡುವಂತ ಕೆಲಸ ತಮ್ಮಿಂದ ಆಯಿತು ಎಂಬ ಹೆಗ್ಗಳಿಗೆ ನಿಮಗೆ ಸಲ್ಲುತ್ತದೆ.

ಈ ನಿಟ್ಟಿನಲ್ಲಿ  ತಾವುಗಳು ಆದಷ್ಟು ಬೇಗ ರಥ ಬೀದಿ ರಸ್ತೆ ಅಗಲೀಕರಣಕ್ಕೆ ಪ್ರಯತ್ನ ಮಾಡಬೇಕಾಗಿ  ಸಮಸ್ತ ಸಿರಸಿಯ ನಾಗರಿಕ ಪರವಾಗಿ ಮಹಾದೇವ ವಿನಂತಿಸಿಕೊಂಡಿದ್ದಾರೆ.

ಇದನ್ನು ಓದಿ : ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ ಸಂಗೀತ ಮಾಂತ್ರಿಕ.

ಸಪ್ಟೆಂಬರ್ 12ರವರೆಗೆ ಶಾಸಕ ಸತೀಶ್ ಸೈಲ್ ಇಡಿ ಕಸ್ಟಡಿಗೆ. ಬಂಧನಕ್ಕೆ ಡಿಕೆಶಿ ಪ್ರತಿಕ್ರಿಯೆ.

ಕಂದಾಯ ಇಲಾಖೆಯಲ್ಲಿ ಏಜೆಂಟರ ಹಾವಳಿ. ಸಚಿವ ಮಂಕಾಳ ವೈದ್ಯ ಕಿಡಿಕಿಡಿ.

ಬೆಳಗಾವಿಯ ಆಸ್ಪತ್ರೆಯಲ್ಲಿ ಆತಂಕ ಮೂಡಿಸಿದ್ದ  ಕಾರವಾರ ಮೂಲದ ಯುವತಿ.