ದಾಂಡೇಲಿ(Dandeli) : ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಕರ್ನಾಟಕ ಗೃಹ ಮಂಡಳಿ ಜಿ+2 ಮನೆ ಹಾಗೂ ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದಿರುವುದಕ್ಕೆ ದಾಂಡೇಲಿಯ ನಗರಸಭೆ ಮುಂದೆ ಅನಿರ್ದಿಷ್ಟ ಅವಧಿಯ ಧರಣಿ ಸತ್ಯಾಗ್ರಹ ನಡೆಸುವ ಬಗ್ಗೆ ಹೋರಾಟ ಸಮಿತಿ ನಿರ್ಧರಿಸಿದೆ.
ಕಳೆದ 7-8 ವರ್ಷಗಳಿಂದ ಮನೆ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಾ ಫಲಾನುಭವಿಗಳು ಅನೇಕ ಹೋರಾಟಗಳನ್ನು ನಡೆಸಲಾಗಿತ್ತು. ಒಟ್ಟು 1106 ಮನೆ ಗಳಲ್ಲಿ ಇಲ್ಲಿಯವರೆಗೆ 108 ಫಲಾನುಭವಿಗಳಿಗೆ ಮಾತ್ರ ಮನೆಗಳನ್ನು ವಿತರಣೆ ಮಾಡಿದ್ದಾರೆ. ಉಳಿದ 998 ಮನೆಗಳ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಗೃಹ ಮಂಡಳಿಯ ಆಯುಕ್ತರು g+2 ಮನೆಗಳ ಕಾಮಗಾರಿಯನ್ನು ಪರಿಶೀಲಿಸಿ ಪ್ರತಿ ತಿಂಗಳು ನೂರು ಮನೆ ಗಳನ್ನು ಸಿದ್ಧ ಮಾಡಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ ಒಂದು ವರ್ಷ ದಲ್ಲಿ 108 ಮನೆಗಳು ಮಾತ್ರ ಸಿದ್ಧಗೊಂಡಿವೆ. ಹೀಗಾಗಿ ಮತ್ತೆ ಹೋರಾಟ ಆರಂಭಿಸುವುದಾಗಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್ ಅವರು ಗೃಹ ಮಂಡಳಿ ಕಚೇರಿ ಬೆಂಗಳೂರ ಆಯುಕ್ತರಿಗೆ ಭೇಟಿಯಾಗಿ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಶಾಸಕರು ಮತ್ತು ರಾಜ್ಯ ಸುಧಾರಣಾ ಆಯೋಗದ ಅಧ್ಯಕ್ಷ ಆರ್ .ವಿ.ದೇಶಪಾಂಡೆ, ವಸತಿ ಸಚಿವ ಜಮೀರ್ ಅಹ್ಮ ದ್, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಳಿಗೂ ಮನವಿ ನೀಡಲಾಗಿದೆ
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಪಾಟೀಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪ್ನವರ್, ಮಮ್ಮದ್ ಗೌಸ್ ಬೆಟ್ಗೇರಿ. ಶ್ಯಾಮ ಬೆಂಗಳೂರು, ಶಿವಾನಂದ್ ಮುರುಗೋಡ, ದತ್ತಾತ್ರಯ ಹೆಗಡೆಕರ್. ಧನಂಜಯ್ ಕಲ್ಗುಟ್ಕ ರ್, ಮುಜಿಬಾ ಚಬ್ಬಿ. ಶಹಜಾದಿ ಕಲ್ಸಾಪುರ್. ಫಾರುಕ್ ಸಲೀಂ ಶೇಕ್, ಸುರೇಶ್ ಗರಗ್ ಹೋರಾಟ ಸಮಿತಿ ಪದಾಧಿಕಾರಿಗಳು ಫಲಾನುಭವಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನು ಓದಿ : ಗೋಕರ್ಣದಲ್ಲಿ ವಿದೇಶಿ ಮಹಿಳೆಯ ರಕ್ಷಣೆ