ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ(Dandeli) ಕಾರ್ಯನಿರ್ವಹಿಸುತ್ತಿರುವ ತಾಮೀರ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ(Tameer Co-operative Credit Society) ಭಾರಿ ಅವ್ಯವಹಾರ(Misconduct) ಬೆಳಕಿಗೆ ಬಂದಿದೆ.
ಸೊಸೈಟಿಯ 9 ಮಂದಿ ಸಿಬ್ಬಂದಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ(Dandeli Police Station) ಪ್ರಕರಣ ದಾಖಲಾಗಿದೆ. ದಾಂಡೇಲಿ ಶಾಖೆಯಲ್ಲಿ ನಕಲಿ ಚಿನ್ನದ(Duplicate Gold) ಮೇಲೆ ಸಾಲ ಮಂಜೂರು ಮಾಡಿ, ಸುಮಾರು ₹5,09,09,450 ರೂಪಾಯಿ ಮೊತ್ತವನ್ನು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟು 208 ಖಾತೆಗಳ ಮೂಲಕ ಈ ಅವ್ಯವಹಾರ(Misconduct) ನಡೆದಿರುವುದಾಗಿ ತಿಳಿದುಬಂದಿದೆ.
ಪ್ರಕರಣದಲ್ಲಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಮೀರ್ ಇಸ್ಮಾಯಿಲ್ ಸೇರಿದಂತೆ ಖಲೀಮುದ್ದೀನ್ ಖಾನ್ ಸರದಾರ್ ಖಾನ್, ಮಂಚಾಲಿ ಚೂಡಾಮಣಿ ನೇತ್ರೇಕರ್, ಹನೀಫ್ ಖಾಸಿಂಸಾಬ್ ಮೋಮೀನ್ ಹಾಗೂ ಇಬ್ರಾಹಿಂ ಗುಲಾಮ್ ಮೊಹಿದ್ದೀನ್ ಸೇರಿದಂತೆ ಒಂಬತ್ತು ಮಂದಿ ಸಿಬ್ಬಂದಿಗಳ ಹೆಸರು ಹೊರಬಂದಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ(Uttarakannada District) 12 ಶಾಖೆಗಳನ್ನು ಹೊಂದಿರುವ ತಾಮೀರ್ ಸಹಕಾರಿ ಸಂಘದ ದಾಂಡೇಲಿ ಶಾಖೆಯಲ್ಲಿ(Dandeli Branch) ನಡೆದ ಈ ಅವ್ಯವಹಾರವು ಸೊಸೈಟಿಗೆ ಭಾರೀ ನಷ್ಟವನ್ನುಂಟುಮಾಡಿದೆ. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮೊಹ್ಮದ್ ಅಜೀಮ್ ರುಕ್ಸುದ್ದೀನ್ ಶೇಖ್ ಅವರು ನೀಡಿದ ದೂರಿನ ಮೇರೆಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ(Dandeli Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಸಹಕಾರಿ ಸಂಸ್ಥೆಗಳ(Cooperative Organization) ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಇನ್ನಷ್ಟು ವಿವರಗಳು ತನಿಖೆಯ ಬಳಿಕ ಹೊರಬರುವ ಸಾಧ್ಯತೆ ಇದೆ. ಸಿಬ್ಬಂದಿಗಳೆ ಈ ರೀತಿಯಲ್ಲಿ ಹಣ ಲಪಟಾಯಿಸಿರೋದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.
ಇದನ್ನು ಓದಿ : ಶಿರಸಿ: ಅಳಿಯನ ಕೊಂದಾತನಿಗೆ ಜೀವಾವಧಿ ಶಿಕ್ಷೆ.
ಹೊನ್ನಾವರದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾಂಗ್ರೆಸ್ ಮುಖಂಡನ ಪುತ್ರ ಸಾವು

