ಜೊಯಿಡಾ: ಖಚಿತ ಮಾಹಿತಿ ಮೇರೆಗೆ ಅಂತಾರಾಜ್ಯ ಡಕಾಯಿತ ತಂಡದ ಇಬ್ಬರನ್ನು ರಾಮನಗರ ಠಾಣೆ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರಾಗಿದ್ದಾರೆ.
ಅನಮೊಡದಲ್ಲಿ ಗೊವಾದಿಂದ ಬಸ್ ನಲ್ಲಿ ಬರುತ್ತಿದ್ದ 5 ಜನ ಢಕಾಯಿತರನ್ನ ಹಿಡಿಯಲು ಎಸ್ ಪಿ ಎಂ.ನಾರಾಯಣ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಮತ್ತು ರಾಮನಗರ ಪಿಎಸ್‌ಐ ಬಸವರಾಜ ಮಬನೂರ ಇವರ ತಂಡ ಪ್ರಯತ್ನಿಸುತ್ತಿರುವ ವೇಳೆ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಮೂವರು ಪರಾರಿಯಾಗಿದ್ದಾರೆ.
ಬಂಧಿತರಿಂದ ಎರಡು ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾದ ಮೂವರಿಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಗೋವಾ ರಾಜ್ಯದಲ್ಲಿರುವ ಗೋವಾ ಸ್ಟಾರ್ ಜುವಲರಿ ಶಾಪ್ ಕಳ್ಳತನ ಮಾಡಲು ಬಂದ ಢಕಾಯಿತರ ತಂಡವಾಗಿದ್ದು ಕಳ್ಳತನ ಮಾಡಲು ಸಾದ್ಯವಾಗದೆ ವಾಪಸ್ ಅನಮೊಡದಿಂದ ತೆರಳುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.