ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ವಿಶಾಖಪಟ್ಟಣಂ ನೌಕಾಪಡೆಯಲ್ಲಿ ಪಿಟಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿನೋದ ತುಕಾರಾಮ ಖಾರ್ವಿ(43) ಶುಕ್ರವಾರ ಅಕಾಲಿಕ ಮರಣ ಹೊಂದಿದ್ದಾರೆ.
ಕಾರವಾರ ಮೂಲದ ವಿನೋದ ಅವರ ಪಾರ್ಥಿವ ಶರೀರ ಭಾನುವಾರ ತವರೂರಿಗೆ ಆಗಮಿಸಿತ್ತು. ನಗರದ ಕೋಡಿಭಾಗದ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಮಳೆಯ ನಡುವೆಯೂ ನಡೆದ ಮೆರವಣಿಗೆಯಲ್ಲಿ ನೂರಾರು ಸಾರ್ವಜನಿಕರು ಭಾಗಿಯಾಗಿ “ಜೈ ಜವಾನ್” ಘೋಷಣೆಗಳನ್ನು ಕೂಗಿದರು.
ನಂತರ ಕೋಡಿಭಾಗದ ರುದ್ರಭೂಮಿಯಲ್ಲಿ ನೌಕಾಪಡೆಯಿಂದ ಸರಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಇದನ್ನು ಓದಿ : ನಾಳೆ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ – ಜಿಲ್ಲಾಧಿಕಾರಿ ಆದೇಶ
ಉಡುಪಿಯಲ್ಲಿ ರೆಡ್ ಅಲರ್ಟ್: ಅಗಸ್ಟ್ 18 ರಂದು ಶಾಲೆಗಳಿಗೆ ರಜೆ ಘೋಷಣೆ
ಕಾರವಾರದಲ್ಲಿ ದಾರುಣ ಘಟನೆ. ಅಳಿಯನ ಕೊಂದ ಮಾವ.