ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಠಾಣಾ(Murdeshwar Station) ವ್ಯಾಪ್ತಿಯ ಬೈಲೂರು ತೆಂಗಾರಲ್ಲಿ ನಿನ್ನೆ ರಾತ್ರಿ ಮನೆಗಳ ಮೇಲೆ ಅಪ್ರಾಪ್ತರ ಗುಂಪೊಂದು ಕಲ್ಲು ತೂರಿದ(Stone Throwing) ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬೈಕ್‌ನಲ್ಲಿ ಬಂದ ಕೆಲವರು ಮನೆಗಳ ಮೇಲೆ ಕಲ್ಲು ತೂರಾಟ(Stone Throwing) ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಮೂವರನ್ನ ಹಿಡಿದು ವಿಷಯವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ  ಪೊಲೀಸರು  ಆರು ಅಪ್ರಾಪ್ತರನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ.

ಹಿಂದು ಮನೆಗಳನ್ನ ಗುರಿಯಾಗಿಸಿ ನಡೆದ ಘಟನೆಯಿಂದ ಆಕ್ರೋಶಗೊಂಡ  ಕೆಲ ಹಿಂದೂ ಕಾರ್ಯಕರ್ತರು(Hindu Workers) ಮುರ್ಡೇಶ್ವರ ಪೊಲೀಸ್ ಠಾಣೆ(Murdeshwar Police Station) ಎದುರು ರಾತ್ರಿ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಪ್ರದೇಶಕ್ಕೆ ಭೇಟಿ ನೀಡಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಅವರ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಶಾಂತಿ–ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮುರ್ಡೇಶ್ವರ ‌ಪೊಲೀಸ್ ಠಾಣೆಯಲ್ಲಿ(Murdeshwar Police Station) ಪ್ರಕರಣ ದಾಖಲಾಗಿದ್ದು, ಯಾತಕ್ಕಾಗಿ ಈ ಕೃತ್ಯ ನಡೆಸಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಮುರ್ಡೇಶ್ವರದಲ್ಲಿ ಸಚಿವರಿಂದ ಎಸ್ ಎಸ್ ಎಲ್ ಸಿ ಪ್ರಗತಿ ಪರಿಶೀಲನಾ ಸಭೆ

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಮರೆಯಲಾಗದು : ಗಂಗಾಧ‌ರ್ ದೊಡ್ಡವಾಡ.

ಅಬಕಾರಿ ಕಾರ್ಯಾಚರಣೆ. ಸ್ಪೀರಿಟ್ ತುಂಬಿದ ಎರಡು ಟ್ಯಾಂಕರ್ ಗೆ ಬ್ರೇಕ್.  ಇಬ್ಬರ ಬಂಧನ