ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಕನ್ನಡ ಚಿತ್ರರಂಗದಲ್ಲಿ(Kannada Cinema) ದೈತ್ಯ ನಟರ ಸಿನೇಮಾಗಳಿಗೆ ಸು ಪ್ರಂ ಸೋ ಎದಿರೇಟು ನೀಡಿದೆ. ಸತತ ನಾಲ್ಕನೇ ವಾರವೂ ಚಿತ್ರ ಮಂದಿರ ಹೌಸ್ ಪುಲ್ ಆಗಿರೋದು ಇದಕ್ಕೆ ಸಾಕ್ಷಿಯಾಗಿದೆ
ರಾಜ್ ಬಿ ಶೆಟ್ಟಿ(Raj B Shetty) ನಿರ್ಮಾಣದಲ್ಲಿ ಜೆ ಪಿ ತುಮಿನಾಡು(J P Tuminadu) ನಿರ್ದೇಶನ ಮಾಡಿರುವ ‘ಸು ಪ್ರಂ ಸೋ’ ಸಿನಿಮಾ ನಾಲ್ಕನೇ ವಾರಕ್ಕೆ ಸೆಂಚುರಿ ಕ್ಲಬ್(Century Club) ಹತ್ತಿರಕ್ಕೆ ಬಂದಿದೆ. ಖ್ಯಾತ ನಟರಾದ ಹೃತಿಕ್, ರಜನಿಕಾಂತ್, ಜೂ. ಎನ್‌ಟಿಆರ್ ಅವರಂಥಾ ದೈತ್ಯ ನಟರ ಸಿನಿಮಾಕ್ಕೇ ಎದಿರೇಟು ನೀಡುವ ಮೂಲಕ, ಸ್ಟಾರ್‌ಗಿರಿಗಿಂತಲೂ ಮನರಂಜನೆ, ತಲ್ಲೀನಗೊಳಿಸುವ ಅನುಭವವೇ ಮುಖ್ಯ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ.
ಬೆಂಗಳೂರು(Bangalore) ಸೇರಿ ರಾಜ್ಯದ ಬಹುತೇಕ ಚಿತ್ರ ಮಂದಿರಗಳಲ್ಲಿ ನಾಲ್ಕನೇ ವಾರವೂ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿರುವುದು ವಿಶೇಷವಾಗಿತ್ತು. ತಾಸಿಗೆವ ಸಾವಿರದ ಲೆಕ್ಕದಲ್ಲಿ ಟಿಕೆಟ್ ಬುಕಿಂಗ್ ಆಗುತ್ತಿತ್ತು. ಸುಪ್ರಂಸೋ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ. ಆದರೆ ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಲಿಲ್ಲ. ಸಿನಿ ತಜ್ಞರ ಪ್ರಕಾರ ಅಗಸ್ಟ್ 15ರ ಅಂದಾಜಿನಂತೆ ಸಿನಿಮಾ ಕಲೆಕ್ಷನ್ 97. 6 ಕೋಟಿ ದಾಖಲಾಗಿತ್ತು. ಕರ್ನಾಟಕದಲ್ಲಿ 75 ಕೋಟಿಗಳಷ್ಟು ಗಳಿಕೆಯಾದರೆ, ಹೊರದೇಶಗಳಲ್ಲಿ 12.5 ಕೋಟಿ, ಹೊರ ರಾಜ್ಯಗಳಲ್ಲಿ 10.1 ಕೋಟಿಗಳಷ್ಟು ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಜೆ ಪಿ ತುಮಿನಾಡು, ಶನೀಲ್ ಗೌತಮ್, ಸಂಧ್ಯಾ ಅರೆಕರೆ, ರಾಜ್ ಬಿ ಶೆಟ್ಟಿ ಮುಖ್ಯಪಾತ್ರಗಳಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ರಾಜ್ ಬಿ ಶೆಟ್ಟಿ ನಿರ್ಮಾಣದ ಸಿನಿಮಾ ನೂರರ ಗಡಿ ದಾಟಿರುವುದು ಅಚ್ಚರಿ ಮೂಡಿಸಿದೆ.
ಇದನ್ನು ಓದಿ : ಯಲ್ಲಾಪುರದಲ್ಲಿ ಭೀಕರ ಅಪಘಾತ. ಮೂವರು ಸ್ಥಳದಲ್ಲಿ ಸಾವು. ಏಳು ಗಂಭೀರ
ಚೆಂಡಿಯಾ ಹಳೆ ವಿದ್ಯಾರ್ಥಿಗಳ ಮಾದರಿ ಕಾರ್ಯ. ಅಮೃತ ಮಹೋತ್ಸವ ಕಟ್ಟಡ ಲೋಕಾರ್ಪಣೆ.
ಇಡಿ ದಾಳಿಯ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?