ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ನವದೆಹಲಿ : ಪ್ರಸಿದ್ಧ ತಬಲಾ ವಾದಕ  ಜಾಕಿರ್ ಹುಸೇನ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧಾನರಾಗಿದ್ದಾರೆ.

ಅವರಿಗೆ 73 ವರ್ಷ ವಯಸ್ಸಾಗಿತ್ತು, ಕೆಲ ದಿನಗಳಿಂದ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತಿದ್ದರು ಎನ್ನಲಾಗಿದೆ.  ಅವರ ನಿಧನದ ಬಗ್ಗೆ ಕುಟುಂಬವು ಖಚಿತಪಡಿಸಿದೆ.

ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರರಾಗಿದ್ದ ಜಾಕಿರ್ ಹುಸೇನ್ ತಮ್ಮ ತಂದೆಯ ಹಾದಿಯಲ್ಲಿ ಸಾಗುವ ಮೂಲಕ ವಿಶ್ವವಿಖ್ಯಾತಿಯನ್ನು ಪಡೆದಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅವರು ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬೆಳಗಿಸಿದ್ದರು.

ಜಾಕಿರ್ ಹುಸೇನ್ ಅವರು ಆರು ದಶಕಗಳ ಕಾಲದ ವೃತ್ತಿ ಜೀವನದಲ್ಲಿ ಹಲವಾರು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರೊಂದಿಗೆ ತಬಲಾ ನುಡಿಸಿದ್ದಾರೆ.  ಇಂಗ್ಲಿಷ್ ಗಿಟಾರ್ ವಾದಕ ಜಾನ್ ಮೆಕ್‌ಲಾಫ್ಲಿನ್, ಪಿಟೀಲು ವಾದಕ ಎಲ್ ಶಂಕರ್ ಮತ್ತು ತಾಳವಾದ್ಯ ವಾದಕ ಟಿಎಚ್ ‘ವಿಕ್ಕು’ ವಿನಾಯಕ್‌ರಾಮ್ ಅವರೊಂದಿಗೆ ಅವರ ಜೊತೆಗಿನ 1973 ರ ಪ್ರಾಜೆಕ್ಟ್ ಇಂದಿಗೂ ಸ್ಮರಣೀಯ ಎನಿಸಿಕೊಂಡಿದೆ.

ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಹುಸೇನ್ ಅವರಿಗೆ 1988 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ಲಭಿಸಿದ್ದವು.

ಇದನ್ನು ಓದಿ : ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಗಣಪತಿ ನಾಯ್ಕ ನಿಧನ

ಮುರ್ಡೇಶ್ವರ ಘಟನೆ. ಭಟ್ಕಳ ಮೂಲದ ಹೈಕೋರ್ಟ್ ಹಿರಿಯ ನ್ಯಾಯವಾದಿಯಿಂದ ದೂರು.

ಮತ್ತೋರ್ವ ಕಬಡ್ಡಿ ಆಟಗಾರ  ಹಠಾತ್ ನಿಧನ

ಭಟ್ಕಳದಲ್ಲಿ ಹೆಜ್ಜೇನು ದಾಳಿ. ಐವರು ಆಸ್ಪತ್ರೆಗೆ.