ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ(Karwar District Jail) ಕೈದಿಗಳ ಬಳಿ ಅಕ್ರಮವಾಗಿ ಮತ್ತೆ ಮೊಬೈಲ್ ಗಳು ಪತ್ತೆಯಾಗಿವೆ(Mobiles Found) .
ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರ ನೇತೃತ್ವದಲ್ಲಿ ನಡೆದ ದಿಡೀರ್ ತಪಾಸಣಾ ಕಾರ್ಯಾಚರಣೆಯಲ್ಲಿ(Search Operations) ಒಟ್ಟು ಏಳು ಮೊಬೈಲ್ ಫೋನ್‌ಗಳು(Mobile Phone) ಹಾಗೂ ಚಾರ್ಜರ್‌ಗಳನ್ನು(Charger) ವಶಪಡಿಸಿಕೊಳ್ಳಲಾಗಿದೆ.
ಕೆಲ ದಿನಗಳ ಹಿಂದೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ(Karwar District Jail) ಅಶಾಂತಿ ಘಟನೆಗಳು ನಡೆದಿತ್ತು. ಗಾಂಜಾ ನೀಡಿಲ್ಲ ಎಂಬ ಕಾರಣಕ್ಕೆ ಕೆಲವು ಕೈದಿಗಳು(Prisoners) ಜೈಲು ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿತ್ತು. ಅಲ್ಲದೆ, ಮತ್ತೊಂದು ಪ್ರಕರಣದಲ್ಲಿ ಜೈಲಿನೊಳಗಿನ ಟಿವಿಯನ್ನು ಕೈದಿಗಳು ಒಡೆದು ಹಾಕಿದ್ದರು.
ಈ ಹಿನ್ನಲೆಯಲ್ಲಿ ಜೈಲಿನಲ್ಲಿ ಶಿಸ್ತು(Discipline) ಹಾಗೂ ಭದ್ರತೆ(Security) ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೈದಿಗಳ ಬಳಿ ಅಕ್ರಮವಾಗಿ ಇಡಲಾಗಿದ್ದ ಮೊಬೈಲ್‌ಗಳು ಪತ್ತೆಯಾಗಿವೆ.
ಈ ಸಂಬಂಧ ಜೈಲು ಅಧಿಕಾರಿಗಳು ಕಾರವಾರ ನಗರ ಠಾಣೆಗೆ(Karwar Town Station) ದೂರು ದಾಖಲಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಮುರ್ಡೇಶ್ವರದಲ್ಲಿ ಜುಗಾರಿ ಅಡ್ಡೆ ಮೇಲೆ ದಾಳಿ: ಇಬ್ಬರ ಬಂಧನ, ನಗದು ಹಾಗೂ ಬೈಕ್‌ಗಳ ವಶಕ್ಕೆ
