ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಲೋಕಾಯುಕ್ತ ಅಧಿಕಾರಿಗಳ ತಂಡ ಉತ್ತರಕನ್ನಡ ಜಿಲ್ಲೆಯ ಎಂಟು  ಉಪನೋಂದಣಾಧಿಕಾರಿ(Sub register) ಕಚೇರಿಗಳ ಮೇಲೆ  ಬುಧವಾರ ಏಕಕಾಲದಲ್ಲಿ ದಾಳಿ(Raid) ನಡೆಸಿದೆ.

ಬೆಳಿಗ್ಗೆ  ಕಾರವಾರ(Karwar), ಕುಮಟಾ(Kumta), ಶಿರಸಿ(Sirsi), ಸಿದ್ದಾಪುರ(Siddapura), ಹಳಿಯಾಳ(Haliyal), ಜೋಯಿಡಾ(Joida), ಯಲ್ಲಾಪುರ(Yallapur) ಹಾಗೂ ಭಟ್ಕಳ(Bhatkal) ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

ಉತ್ತರಕನ್ನಡ ಲೋಕಾಯುಕ್ತ(Uttarakannada Lokayukta) ಎಸ್ಪಿ ಕುಮಾರ ಚಂದ್ರ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ‌ ರಾಜ್ಯದ ವಿವಿಧ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಮುಂಡಗೋಡು ಉಪನೋಂದಣಾಧಿಕಾರಿ(Mundgod Sub Register) ಕಚೇರಿಯಲ್ಲಿ ಯುಟ್ಯೂಬರ್ ಮುಕಳೆಪ್ಪ(Youtuber Mukaleppa) ವಿವಾಹ ನೋಂದಣಿಯನ್ನ  ವ್ಯತ್ಯಾಸದ ದಾಖಲೆ  ಕೊಟ್ಟ ಬಗ್ಗೆ ಹಿಂದೆ ದೂರು ನೀಡಲಾಗಿತ್ತು. ವಿವಾಹ ನೋಂದಣಿಗೆ ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣಗಳು ಹಾಗೂ ಹಣ ಪಡೆದು ಪ್ರಮಾಣಪತ್ರ ನೀಡಿದ ಆರೋಪಗಳ ಮೇಲೆ ಅಧಿಕಾರಿಗಳು  ತನಿಖೆ ನಡೆಸುತ್ತಿದ್ದಾರೆ.

ಅಂಕೋಲಾ(Ankola) ಹಾಗೂ ಹೊನ್ನಾವರ(Honnavar) ಕಚೇರಿಗಳಲ್ಲಿ ಕಳೆದ ತಿಂಗಳು ಇದೇ ರೀತಿಯಾಗಿ  ಲೋಕಾಯುಕ್ತ ದಾಳಿ ನಡೆಸಿದಾಗ   ಹಲವು ಲೋಪಗಳು ಬಹಿರಂಗವಾಗಿತ್ತು. ಈ  ಹಿನ್ನೆಲೆಯಲ್ಲಿ ಈಗ  8 ಕಡೆಗಳಲ್ಲಿ  ದಾಳಿ ನಡೆದಿದೆ.

ಉಪನೋಂದಣಾಧಿಕಾರಿ ಕಚೇರಿಯಲ್ಲಿ‌ ಸಾರ್ವಜನಿಕರಿಗೆ  ನಿರಂತರವಾಗಿ ಆಗುತ್ತಿರುವ ತೊಂದರೆಯ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಅಧಿಕಾರಿಗಳು, ಶಾಕ್ ನೀಡಿದ್ದಾರೆ.

ಇದನ್ನು ಓದಿ : ರಾಷ್ಟ್ರಗೀತೆಗೆ ಅವಮಾನ? — ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಚರ್ಚಾಸ್ಪದ ಹೇಳಿಕೆ.

ಅಕ್ರಮ ಗೋವಾ ಸಾಗಾಟ. ಕಾರವಾರದ ಮೂವರ ಬಂಧನ

ಭಟ್ಕಳಕ್ಕೆ ಬಂತು ಹವಾಲ ಹಣ, ಬಂಗಾರ. ಪತ್ತೆ ಮಾಡಿದ ಪೊಲೀಸರು. ಓರ್ವ ಆರೆಸ್ಟ್.

ಹೊನ್ನಾವರ ವಾಣಿಜ್ಯ ಬಂದರು ಯೋಜನೆ. ಸಿಎಂ ಭೇಟಿಯಾದ ಖ್ಯಾತ ಪರಿಸರವಾದಿ ಮೇದಾ ಪಾಟ್ಕರ್.

ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ವೈಭವ