ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಮನೆಯ ಸಮೀಪ ಮೇಯಲು ಹೋದ ಎಮ್ಮೆಗಳ ಮೇಲೆ ಹುಲಿ ದಾಳಿ(Tiger Attack) ನಡೆಸಿದ ಘಟನೆ ಜೋಯಿಡಾ ತಾಲೂಕಿನ(Joida Taluku) ಹರೇಗಾಳಿಯಲ್ಲಿ ನಡೆದಿದೆ.

ಹುಲಿಯ ದಾಳಿಯಿಂದ ಎರಡು ಎಮ್ಮೆಗಳು ಸಾವನ್ನಪ್ಪಿದ್ದು ಇನ್ನೆರಡು ಎಮ್ಮೆಗಳಿಗೆ(Buffalo) ಗಂಭೀರ ಗಾಯವಾಗಿದೆ. ಅಂಬೇವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹರೇಗಾಳಿ ನಿವಾಸಿ ಸಕ್ಕುಬಾಯಿ ಸಗ್ಗು ಬೋಡಕೆಯವರಿಗೆ ಸೇರಿದ ಎಮ್ಮೆಗಳಾಗಿದೆ
ಹೈನುಗಾರಿಕೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಬದುಕು ನಡೆಸುತ್ತಿದ್ದ ಸಕ್ಕುಬಾಯಿ ಸಗ್ಗು ಬೋಡಕೆಯವರು ಸಾಕಿದ ಎಮ್ಮೆಗಳನ್ನ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಸೂಕ್ತ ಪರಿಹಾರವನ್ನು ಒದಗಿಸಬೇಕಾಗಿದೆ.
ಇದನ್ನು ಓದಿ : ಹೆದ್ದಾರಿಯಲ್ಲಿ ಪಲ್ಟಿಯಾದ ಸಿಮೆಂಟ್ ತುಂಬಿದ ಲಾರಿ.
ರಾಜ್ಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ದಿನಾಂಕ ಘೋಷಣೆ
