ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಇಂದು ಉತ್ತರಕನ್ನಡ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಕ್ಕಳ ಹಿತದೃಷ್ಟಿಯಿಂದ  ಭಟ್ಕಳ(Bhatkal), ಅಂಕೋಲಾ(Ankola), ಕುಮಟಾ(Kumta), ಹೊನ್ನಾವರ(Honnavar) ಮತ್ತು ಕಾರವಾರ ತಾಲ್ಲೂಕುಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ  ನೀಡಲಾಗಿದೆ.

ಈ ಆದೇಶವನ್ನು ಸಂಬಂಧಪಟ್ಟ ಬಿಇಓರವರು ತಕ್ಷಣ ಕಾರ್ಯರೂಪಕ್ಕೆ ತರುವಂತೆ ತಿಳಿಸಲಾಗಿದೆ.  ಈ ರಜಾ ದಿನವನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆಯಾ ತಾಲೂಕಿನ ತಹಶೀಲ್ದಾರ ತಿಳಿಸಿದ್ದಾರೆ.

ಇದನ್ನು ಓದಿ : ಪೋಲೀಸ್ ಜೀಪಿಗೆ ದಂಡ ವಿಧಿಸಿದ ಪೋಲೀಸರು!