ಭಟ್ಕಳ(BHATKAL) : ಶಿರಾಲಿ ರಾಷ್ಟ್ರೀಯ ಹೆದ್ದಾರಿ(SHIRALI National Highway) ಬಳಿ ಅನಾದಿ ಕಾಲದ ಬೃಹತ್ ಮರದ (Big Tree) ಕೊಂಬೆಯೊಂದು ಮುರಿದು ಬಿದ್ದ ಘಟನೆ ನಡೆದಿದೆ.
ಪರಿಣಾಮವಾಗಿ ಮೂರು ಬೈಕ್, ಆಟೋ ರಿಕ್ಷಾ ಜಖಂ ಆಗಿದೆ. ಅದೃಷ್ಟವಶಾತ್ ಯಾರಿಗೂ ಏನು ಅನಾಹುತವಾಗಿಲ್ಲ. ಸುಮಾರು 400 ವರ್ಷಕ್ಕೂ ಹಳೆಯ ಆಲದ ಮರವಾಗಿದ್ದು ಬೆಳಿಗ್ಗೆ ದೊಪ್ಪನೇ ಮುರಿದು ಬಿದ್ದಿದೆ.
ಶಿರಾಲಿಯ ಪಾಕಶಾಲೆಯ ಎದುರು, ಗುಮ್ಮನಹಕ್ಕಲ್ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ವಾಹನಗಳು ಓಡಾಡುತ್ತಿದ್ದು, ಈ ಸಂದರ್ಭದಲ್ಲಿ ವಾಹನ ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ಆಗಿಲ್ಲ. ಆದರೆ ನಿಲ್ಲಿಸಿದ್ದ ಮೂರು ಬೈಕ್, ಆಟೋಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಗೋವು ಕಳ್ಳತನ. ಆರೋಪಿಗಳ ಬಂಧನ
ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಂದ ಸ್ನೇಹಿತ