ಕುಂದಾಪುರ(Kundapur) : ತಾಲೂಕಿನ ಪ್ರವಾಸಿಗರ ಹಾಟ್ ಸ್ಪಾಟ್ ಸ್ಥಳ ತ್ರಾಸಿ ಬೀಚ್ ನಲ್ಲಿ(Trasi Brach) ಟೂರಿಸ್ಟ್ ಬೋಟ್(Tourist Boat) ಪಲ್ಟಿ ಹೊಡೆದಿದೆ. ಪರಿಣಾಮವಾಗಿ ಜೆಸ್ಕಿ  ಬೋಟ್ ರೈಡರ್ ಓರ್ವರು ಕಣ್ಮರೆಯಾಗಿದ್ದಾರೆ.

ಮುರ್ಡೇಶ್ವರದ(Murdeshwar) ರವಿದಾಸ್ ಎಂಬುವವರು ಕಣ್ಮರೆಯಾದವರು. ಬೋಟ್ ನಲ್ಲಿದ್ದ ಬೆಂಗಳೂರಿನ(Bangalore) ಪ್ರವಾಸಿಗ ಪ್ರಶಾಂತ್ ಎಂಬುವವರು ಬಚಾವ್ ಆಗಿದ್ದಾರೆ. ಲೈಫ್ ಜಾಕೆಟ್ ತೊಟ್ಟಿದ್ದರಿಂದ ಪ್ರಶಾಂತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಂಗೊಳ್ಳಿ ಪೊಲೀಸರು(Gangolli Police), ಕರಾವಳಿ
ಪೊಲೀಸ್ ಪಡೆ(Karavali Police) ಮತ್ತು ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ. ಉಡುಪಿಯ(Udupi) ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ (Gangolli Police Station) ಪ್ರಕರಣ ದಾಖಲಾಗಿದೆ.

ಕಳೆದೆ ಕೆಲವ ದಿನಗಳ ಹಿಂದೆ ಮುರ್ಡೇಶ್ವರ ಕಡಲ ತೀರದಲ್ಲಿ ಶಾಲಾ ಮಕ್ಕಳು ಪ್ರವಾಸಕ್ಕೆಂದು ಹೋದಾಗ  ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋದ 7 ಮಂದಿ ಪೈಕಿ ನಾಲ್ವರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅಲ್ಲಿನ ಘಟನೆಯಿಂದಾಗಿ ಮುರ್ಡೇಶ್ವರ ಕಡಲತೀರಕ್ಕೆ(Murdeshwar Beach) ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಘಟನೆ ಮಾಸುವ ಮುನ್ನವೇ ಕಡಲ ತೀರದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ : ಪಡಿತರ ಅಕ್ಕಿ ಅಕ್ರಮ ಸಾಗಾಟ ಮಾಡುತ್ತಿದ್ದ ಆಸಾಮಿ ಸಮೇತ ವಾಹನ ವಶಕ್ಕೆ.

ಕರಾವಳಿಯಲ್ಲಿ ತಿಮಿಂಗಿಲ ವಾಂತಿ ಮಾರಾಟ ಜಾಲ. ಕಾರ್ಯಾಚರಣೆಗಿಳಿದ ಅಧಿಕಾರಿಗಳೊಂದಿಗೆ ಸಂಘರ್ಷ.

ಪ್ರವೀಣ್ ನೆಟ್ಟಾರು ಹತ್ಯೆ, ವಿಮಾನ ನಿಲ್ದಾಣದಲ್ಲಿ ಮತ್ತೋರ್ವ ಆರೆಸ್ಟ್.