ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹಾಸನ : ಯುವ ಐಪಿಎಸ್ ಅಧಿಕಾರಿಯೋರ್ವ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಮಾರ್ಗದ ಕಿತ್ತಾನೆ ಗಡಿ ಬಳಿ ಸಂಭವಿಸಿದೆ.
ಮಧ್ಯಪ್ರದೇಶ ಮೂಲದ ಹರ್ಷಬರ್ದನ್(26) ಮೃತ ದುರ್ದೈವಿ. ಚಾಲಕ ಹಾಸನದ ಡಿಎಆರ್ ಕಾನಸ್ಟೇಬಲ್ ಮಂಜೇಗೌಡ ಗಾಯಗೊಂಡವರು. ಹರ್ಷ ಬರ್ದನ್ 153ನೇ ರ್ಯಾಂಕ್ ಪಡೆದು ಪ್ರೊಬೆಷನರಿ IPS ಅಧಿಕಾರಿಯಾಗಿದ್ದರು. ಹಾಸನದ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ವರದಿ ಮಾಡಿಕೊಳ್ಳಲು ಮೈಸೂರಿನಲ್ಲಿ ಐಜಿಯವರನ್ನು ಭೇಟಿಯಾಗಿ ಹಾಸನದತ್ತ ವಾಪಾಸ್ ಬರುತ್ತಿದ್ದಾಗ ಟಯರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ತಡೆಗೋಡೆಗೆ ಬುಲೇರೋ ಜೀಪ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಕ್ಷಿಣ ವಲಯ ಐಜಿಪಿ ಡಾ ಬೋರಲಿಂಗಯ್ಯ ಭೇಟಿ ನೀಡಿದ್ದರು.
ಸತತ ನಾಲ್ಕು ಗಂಟೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹರ್ಷ ಬರ್ದನ್ ಅವರಿಗೆ ತಲೆಗೆ ಗಂಬೀರ ಸ್ವರೂಪದ ಗಾಯವಾಗಿತ್ತು. ಮಿದುಳಿನಲ್ಲಿ ತೀವೃ ಸ್ವರೂಪದ ರಕ್ತಸ್ರಾವವಾಗಿತ್ತು. ಹಾಸನದ ಬೇರೆ ಬೇರೆ ಆಸ್ಪತ್ರೆ ವೈದ್ಯರು ಬಂದು ಚಿಕಿತ್ಸೆ ಉಸ್ತುವಾರಿ ವಹಿಸಿದ್ದರೂ ಪ್ರಯೋಜನವಾಗಿಲ್ಲ.
ಇದನ್ನು ಓದಿ : ಹಸು ಹುಡುಕಲು ಹೋದ ಮೂವರು ಮಹಿಳೆಯರು ನಾಪತ್ತೆ