ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola) : ತಂದೆ ಕೆಲಸ ಮಾಡುತ್ತಿದ್ದ ವೇಳೆ ಮಗುವೊಂದು ಗೊಬ್ಬರ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ(Dongre GP) ವ್ಯಾಪ್ತಿಯ ಹಳವಳ್ಳಿಯಲ್ಲಿ ಸಂಭವಿಸಿದೆ.
ಎರಡು ವರ್ಷ ಮೂರು ತಿಂಗಳ ಸಾದ್ವಿ ಶ್ರೀಕಾಂತ್ ಹೆಬ್ಬಾರ್ ಸಾವನ್ನಪ್ಪಿದ ಮಗು. ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಎಂದು ತಿಳಿದುಬಂದಿದೆ.
ನಿನ್ನೆ ಎಂದಿನಂತೆ ಸಾದ್ವಿ ತನ್ನ ತಂದೆಯೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಳು. ಕೊಟ್ಟಿಗೆಯ ಕೆಲಸದಲ್ಲಿ ಮಗ್ನರಾಗಿದ್ದ ಶ್ರೀಕಾಂತ್ ಹೆಬ್ಬಾರ್ ಕೆಲ ಸಮಯದ ಬಳಿಕ ಮಗಳ ಸದ್ದು ಕೇಳಿಸದೇ ಇರುವುದರಿಂದ ಸುತ್ತಲೂ ಹುಡುಕಾಡಿದ್ದಾರೆ. ಗೊಬ್ಬರ ಗುಂಡಿಯಲ್ಲಿ ಮಗು ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಗುಂಡಿಯಿಂದ ಮಗುವನ್ನು ಮೇಲಕೆತ್ತಿ ಅಂಕೋಲಾ ತಾಲೂಕಾಸ್ಪತ್ರೆಗೆ(Ankola Hospital) ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ
.ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಭಟ್ಕಳದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದು ಕಾಲುವೆಗೆ ಬಿದ್ದು ಮೃತಪಟ್ಟಿತ್ತು. ಹೀಗಾಗಿ ಸಾರ್ವಜನಿಕರು ತಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಬೇಕಾಗಿದೆ.
ಇದನ್ನು ಓದಿ : ಮುರ್ಡೇಶ್ವರ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ. ಮೂವರ ಬಂಧನ. ಮಹಿಳೆ ರಕ್ಷಣೆ
ಮಳೆಯ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ.