ಗೋಕರ್ಣ(GOKARN): ಮಳೆಗೋಸ್ಕರ ಇಂದ್ರದೇವ (INDRDEVA)ನನ್ನು ಮೆಚ್ಚಿಸುವ ವಿಶಿಷ್ಟ ಆಚರಣೆಯನ್ನ ಹಾಲಕ್ಕಿ ಒಕ್ಕಲಿಗ (HALAKKI OKKALIGAS) ಸಮುದಾಯದವರು ಮುಂದುವರಿಸಿಕೊಂಡು ಬಂದಿದ್ದಾರೆ.

ಇದನ್ನು ಓದಿ

ಈಶ್ವರ್ ಮಲ್ಪೆ ಕಾರ್ಯಾಚರಣೆ

ಶಿರಸಿಯಲ್ಲಿ ಬಾರೀ ದರೋಡೆ

ಅನಾದಿಕಾಲದಿಂದ ಹಾಲಕ್ಕಿ ಒಕ್ಕಲಿಗೆ ಮಹಿಳೆಯರೇ ನಡೆಸುವ ದಾದುಮ್ಮನ ಮದುವೆ (DADUMMNAN MADUVE)  ವಿಜೃಂಭಣೆಯಿಂದ ಗೋಕರ್ಣದ ತಾರಮಕ್ಕಿಯಲ್ಲಿ ನಡೆಯಿತು.

ಇಲ್ಲಿ ವರನ ಸ್ಥಾನದಲ್ಲಿ ಹೆಣ್ಣು ಇರುವುದೇ ಈ ಆಚರಣೆಯ ವಿಶಿಷ್ಟತೆ.  ಆಷಾಢ ಬಹುಳ ಏಕಾದಶಿಯಂದು ನಡೆದ ನಿಶ್ಚಿತಾರ್ಥದಲ್ಲಿ ಯಾರು ವಧು ಎಂಬುದನ್ನ ಮಹಿಳೆಯರೇ  ತೀರ್ಮಾನಿಸುತ್ತಾರೆ. ಅದರಂತೆ ಸುಮಂಗಲೆಯರು ವಧು-ವರರಾಗ್ತಾರೆ.

ಆಷಾಢ ಅಮಾವಾಸ್ಯೆ ಸಂಜೆ ಕೇತಕಿ ವಿನಾಯಕ (KETAKI VINAYAKA) ಮತ್ತು ಕರೆ ದೇವರ ಸನ್ನಿಧಿಯಲ್ಲಿ ಅಲ್ಲಿ ಹರಿಯುತ್ತಿರುವ ತೊರೆಯ ಒಂದು ಬದಿಯಲ್ಲಿ ನಿಂತು  ವರನ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸುತ್ತಾರೆ.  ಬಳಿಕ ಜಾನಪದ ಹಾಡಿನ ಮೂಲಕ  ಹೆಣ್ಣು-ಗಂಡು (FEMALE-MALE) ಒಪ್ಪಿಗೆಯಾಗಿ ದೇವರ (GOD) ಎದುರು ಇಬ್ಬರಿಗೂ ಮಾಲೆ ಹಾಕಿಸಿ ವಿವಾಹ (MARRIED) ನೇರವೇರಿಸುತ್ತಾರೆ.

ಮದುವೆಯಲ್ಲಿ ನೂರಾರು ಜನರ ಸಮ್ಮುಖದಲ್ಲಿ ಆಕರ್ಷಕ ಮೆರವಣಿಗೆ (PROCESSION) ನಡೆಯುತ್ತದೆ. ನವವಿವಾಹಿತ ಜೋಡಿಯನ್ನು ಮುಖ್ಯ ಗೌಡರ ಮನೆಗೆ ಕರೆತರುವಾಗ ಸಾಂಪ್ರದಾಯಿಕ ಹಾಡು, ಆಧುನಿಕತೆಯ ಡಿಜಿ,  ಮಕ್ಕಳ (CHILDREN) ಜೊತೆ ದೊಡ್ಡವರು ನರ್ತಿಸಿ (DANCE) ಸಂಭ್ರಮಿಸುತ್ತಾರೆ. ಆಚರಣೆಯಲ್ಲಿ ಸಂಪೂರ್ಣ ಜಾನಪದೀಯ ಸೊಗಡು ಎದ್ದು ಕಾಣುತ್ತದೆ. ಮೆರವಣಿಗೆ ಹುಳಸೀಕೇರಿ ಗೌಡರ ಮನೆಗೆ ಬರುತ್ತದೆ. ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆದು ವಧು-ವರರಿಗೆ ಉಡುಗೊರೆ ನೀಡಿ ಸಿಹಿ(SWEET) ಹಂಚಿಕೆ ಮತ್ತು ಪಾನೀಯ(DRINKS) ವಿತರಣೆಯೊಂದಿಗೆ ದಾದುಮ್ಮನ ಮದುವೆ ಮುಕ್ತಾಯಗೊಳಿಸಲಾಗುತ್ತದೆ.

ಈ ಬಾರಿಯ ಆಚರಣೆಯಲ್ಲಿ ಹಿರಿಯ (SENIOR) ಮುತ್ತೈದೆಯರು ಹಾಡುತ್ತ (SONGS) ಸಾಮಾನ್ಯವಾಗಿ ವಿವಾಹದಲ್ಲಿ ಆಚರಿಸಲಾಗುವ ಎಲ್ಲ ಪದ್ಧತಿಗಳನ್ನು ನಡೆಸಿಕೊಟ್ಟರು. ಈ ವಿವಾಹ ಪದ್ಧತಿಯಲ್ಲಿ ಪುರುಷ ಪಾತ್ರವಿಲ್ಲ. ಎಲ್ಲಾ ಕಾರ್ಯವನ್ನ ಮಹಿಳೆಯರು  (WOMEN) ನಡೆಸಿಕೊಡುತ್ತಾರೆ. 

ಹುಳಸೇಕೇರಿ ಹಾಲಕ್ಕಿ ಒಕ್ಕಲಿಗ (HULASIKERI HALAKKI OKKALIGAS) ಸಮುದಾಯದ(COMMUNITY) ಪ್ರತಿ ಮನೆಯಲ್ಲಿ ಮಹಿಳೆಯರು ಭಾಗವಹಿಸಿ ಸಂಪ್ರದಾಯವನ್ನು ಚಾಚು ತಪ್ಪದೆ ಮುಗಿಸಿದರು. ಈ ಬಾರೀ ಉತ್ತಮವಾಗಿ ಮಳೆ (RAIN) ಸುರಿದು ಒಳ್ಳೆಯ ಫಸಲು ಕೈ ಸೇರಲಿ ಎಂದು ಪ್ರಾರ್ಥಿಸಿದರು(PRAYER). ತಾಂತ್ರಿಕತೆ, ಆಧುನಿಕತೆ ಎಷ್ಟೇ ಮುಂದುವರಿದರೂ ಕೂಡ ಉತ್ತರ ಕನ್ನಡ (UTTARKANNADA) ಜಿಲ್ಲೆಯ ಹಾಲಕ್ಕಿ ಒಕ್ಕಲಿಗರು ಇಂದಿಗೂ ತಮ್ಮ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನಿಯವಾಗಿದೆ.