ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಊಟ ಮಾಡುತ್ತಿದ್ದ ವೇಳೆ ಅನ್ನದ ಅಗುಳು ಗಂಟಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಕಾರವಾರ(Tragedy) ತಾಲೂಕಿನ ಬಿಣಗಾದಲ್ಲಿ(Binaga) ಸಂಭವಿಸಿದೆ.
ಇಲ್ಲಿನ ಮಾಳಸವಾಡ ನಿವಾಸಿ ಅಮಿತ ಮಾಳಸೆಕರ್ (38) ಮೃತ ದುರ್ದೈವಿ. ಕಾರು ಚಾಲನೆ ವೃತ್ತಿಯಲ್ಲಿದ್ದ ಅಮಿತ ಕಳೆದ ಕೆಲ ದಿನಗಳಿಂದ ಚಿಕಿತ್ಸೆಯಲ್ಲಿದ್ದರು. ವೈದ್ಯರು ನೀಡಿದ ಔಷಧವನ್ನು ಅಮಿತ ಮಾಳ್ಸೆಕರ್ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ರವಿವಾರ ಮಧ್ಯಾಹ್ನ ಮನೆಯಲ್ಲಿ ಊಟ ಮಾಡುವಾಗ ಗಂಟಲಿನಲ್ಲಿ ಅನ್ನ ಸಿಲುಕಿ ತೊಂದರೆ ಅನುಭವಿಸಿದರು. ತಕ್ಷಣ ಮನೆಯವರು ನೀರು ಕುಡಿಸಿದರು. ಆಗ ಅಮಿತ್ ಕುಸಿದು ಬಿದ್ದರು. ಮನೆಯವರು 108 ಆಂಬುಲೆನ್ಸ ಮೂಲಕ ಅವರನ್ನು ಕಾರವಾರದ ಕಿಮ್ಸ್ ಆಸ್ಪತ್ರೆಗೆ (Krims Hospital) ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ಸಾವನಪ್ಪಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಅಮಿತ್ ಅವರ ಸಹೋದರ ವಿಶ್ವನಾಥ ಮಾಳ್ವೆಕರ್ ಅವರಿಂದ ಕಾರವಾರದ ಗ್ರಾಮೀಣ ಠಾಣೆ ಪೊಲೀಸರು(Rural Station Police) ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ : ಬಡ ಮೀನುಗಾರನ ಲಕ್ ಬದಲಿಸಿದ ಸಚಿನ್ ತೆಂಡೂಲ್ಕರ್.
ಮೀನು ಮಾರುಕಟ್ಟೆ ಸ್ಥಳಾಂತರವಿಲ್ಲ. ಜನರ ಅನುಕೂಲಕ್ಕಾಗಿ ಮತ್ತೊಂದು ನಿರ್ಮಾಣ