ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಮುರ್ಡೇಶ್ವರ ಸಮೀಪದ ಕಡಲತೀರದಲ್ಲಿ ಬೆಳಗಿನ ಜಾವ ದುರಂತವೊಂದು (Tragedy) ನಡೆದಿದೆ. ಗಿಲ್ನೆಟ್ ದೋಣಿ (Gilnet Boat) ಮಗುಚಿ ಮೀನುಗಾರನೋರ್ವ ನಾಪತ್ತೆಯಾಗಿದ್ದು ಇನ್ನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ
ಮಾಧವ ಹರಿಕಾಂತ (45) ಎಂಬಾತ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದರೆ, ವೆಂಕಟೇಶ್ ಅಣ್ಣಪ್ಪ ಹರಿಕಾಂತ್ (26) ನಾಪತ್ತೆಯಾಗಿದ್ದಾನೆ. ಜನಾರ್ಧನ ಹರಿಕಾಂತ್ ಎಂಬುವವರಿಗೆ ಸೇರಿದ ನವಗ್ರಹ ಹೆಸರಿನ ದೋಣಿ ಬೆಳಿಗ್ಗೆ ಮೀನುಗಾರಿಕೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಆನಂದ ಅಣ್ಣಪ್ಪ ಹರಿಕಾಂತ ಎಂಬಾತನ ರಕ್ಷಣೆ ಮಾಡಲಾಗಿದೆ. ಕಡಲ ಅಬ್ಬರ ಹೆಚ್ಚಾಗಿದ್ದರಿಂದ ದೋಣಿ ತೆಗೆದುಕೊಂಡು ಸಮುದ್ರಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮುರ್ಡೇಶ್ವರ ಠಾಣೆ(Murdeshwar Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಒಂದು ದಿನ ಕೆಲಸ ಮಾಡಿಲ್ಲ. 35 ಲಕ್ಷ ರೂ. ವೇತನ ಪಡೆದ ಕಾನಸ್ಟೇಬಲ್.