ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ದೀಪಾವಳಿಯಂದೇ(Deepavali) ವಿದ್ಯುತ್ ಅವಘಡದಲ್ಲಿ ದಂಪತಿಗಳು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಕಾಸರಕೋಡ(Kasarakodu) ಬಟ್ಟೆ ವಿನಾಯಕಕೇರಿ ಪ್ರದೇಶದಲ್ಲಿ ನಡೆದಿದೆ.
ಸಂತೋಷ ಗೌಡ ಮತ್ತು ಅವರ ಪತ್ನಿ ಸೀತಾ ಗೌಡ ಮೃತ ದುರ್ದೈವಿಗಳಾಗಿದ್ದಾರೆ. ಮನೆಯ ಮೇಲ್ಭಾಗದಿಂದ ಹಾದು ಹೋಗಿದ್ದ ವಿದ್ಯುತ್ ಲೈನ್ ಅಕಸ್ಮಿಕವಾಗಿ ಹರಿದು ಬಿದ್ದುದರಿಂದ ದಂಪತಿಗೆ ಶಾಕ್ ತಗುಲಿದೆ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಘಟನೆಯ ಬಳಿಕ ಇಬ್ಬರ ಮೃತದೇಹಗಳನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ(Honnavar Government Hospital) ಸ್ಥಳಾಂತರಿಸಲಾಗಿದೆ. ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮತ್ತು ಕುಟುಂಬದವರು ಆರೋಪಿಸಿದ್ದಾರೆ. ತಮಗೆ “ನ್ಯಾಯ ಸಿಗುವವರೆಗೂ ಮೃತದೇಹ ಸ್ವೀಕರಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಹಬ್ಬದ(Deepavali Festival) ದಿನವೇ ಈ ಅವಘಡ ಸಂಭವಿಸಿರುವುದು ಗ್ರಾಮದಲ್ಲಿ ದುಃಖದ ಕಾರ್ಮೋಡ ಆವರಿಸಿದೆ. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಘಟನೆ ಖಂಡಿಸಿ ಹೊನ್ನಾವರ ಸರ್ಕಾರಿ ಆಸ್ಪತ್ರೆ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿ : ಕಾಂತಾರ-1 ರಲ್ಲಿ ಮಿಂಚಿದ ಭಟ್ಕಳದ ಬೆಡಗಿ.ರಾಣಿ ಪಾತ್ರದಲ್ಲಿ ಗಮನ ಸೆಳೆದ ರಮ್ಯಾ ನಾಯ್ಕ
ವಡ್ಡಿ ಘಾಟ್ ತಿರುವಿನಲ್ಲಿ ಸರ್ಕಾರಿ ಬಸ್ ಪಲ್ಟಿ. 49 ಪ್ರಯಾಣಿಕರು ಬಚಾವ್.