ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಬುದಾಬಿ(Abudabi) :   ಭೀಕರ ರಸ್ತೆ ಅಪಘಾತದಲ್ಲಿ  ಒಂದೇ ಕುಟುಂಬದ ನಾಲ್ವರು ಮಕ್ಕಳು  ಮೃತಪಟ್ಟ ಘಟನೆ ಅಬುಧಾಬಿಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮನೆ ಕೆಲಸದ ಮಹಿಳೆಯೋರ್ವಳು(House worker) ಸಾವನ್ನಪ್ಪಿದ್ದಾಳೆ. ಮಕ್ಕಳ ಪೋಷಕರು ಗಂಭೀರ(Parents Seriously) ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ಮಲ್ಲಪುರಂ(Keral Malkapuram) ಜಿಲ್ಲೆಯ ಕಿಝಿಸ್ಸೇರಿ ಪುಲಿಯಕ್ಕೋಡ್ ನಿವಾಸಿಗಳಾದ ಮಲಯನ್ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ದಂಪತಿಯ ಮಕ್ಕಳಾದ ಆಶಾಸ್ (14), ಅಮ್ಮರ್ (12), ಅಝಂ(7) ಮತ್ತು ಅಯಾಶ್ (5)  ಮೃತಪಟ್ಟವರಾಗಿದ್ದಾರೆ.

ಅವರ ಜೊತೆ  ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಮ್ರವಟ್ಟಂ ಮೂಲದ ಬುಶ್ರಾ ಎಂಬಾಕೆ ಕೂಡ ಸಾವು ಕಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಅಬ್ದುಲ್ ಲತೀಫ್ ಮತ್ತು ರುಕ್ಸಾನಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಗಿದೆ.

ಹೊಸ ವರ್ಷದ ಆಚರಣೆಯ(New Year Celebration) ಭಾಗವಾಗಿ ಅಬುಧಾಬಿಯಲ್ಲಿ(Abudabhi) ಆಯೋಜಿಸಲಾಗಿದ್ದ ಲಿವಾ ಫೆಸ್ಟ್(Liva Fest) ವೀಕ್ಷಿಸಿ ಕುಟುಂಬದವರು ವಾಪಾಸ್  ಆಗುತ್ತಿದ್ದ ಸಂದರ್ಭದಲ್ಲಿ  ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನು ಓದಿ : ಹೊನ್ನಾವರದಲ್ಲಿ ಕಾರು ಪಲ್ಟಿ: ಇಬ್ಬರು ಸಜೀವ ದಹನ

ಪ್ರೀತಿಸಿದ ಯುವತಿ ಮದುವೆಯಾಗಲು ಒಪ್ಪಲಿಲ್ಲ. ಉಸಿರು ಕಳೆದುಕೊಂಡ ಯುವಕ.

ಗೋವಾ ನೈಟ್ ಕ್ಲಬ್ ದುರಂತ. ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಆಗ್ರಹ.