ಅಂಕೋಲಾ(ANKOLA) : ಸತತ ಕಾರ್ಯಾಚರಣೆಯಿಂದಾಗಿ ಗುತ್ತಿಗೆ ಪಡೆದುಕೊಂಡ ಅಭಿಷೇನಿಯ ಒಸಿಯನ್ ಸರ್ವಿಸ್ ಕಂಪನಿ ನಾಪತ್ತೆಯಾಗಿದ್ದ ಭಾರತ್ ಬೆಂಜ್ ಟ್ರಕ್(BHARAT BENZ TRUCK) ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಜುಲೈ 16ರಂದು ಸುರಿದ ಮಹಾಮಳೆಗೆ ಉತ್ತರಕನ್ನಡ(UTTARKANNADA) ಜಿಲ್ಲೆ ತತ್ತರಿಸಿತ್ತು. ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು(SHIRURU LANDSLIDE) ಹಲವು ವಾಹನಗಳು ಮತ್ತು ಹಲವು ನಾಗರಿಕರು ಸಿಲುಕಿದ್ದಾರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಿದಾಡಿತು.
ದುರಂತದಲ್ಲಿ ಒಟ್ಟು 11 ಜನರು ಮೃತರಾಗಿದ್ದರು. ಘಟನೆ ನಡೆದ ಸ್ಥಳದಲ್ಲಿದ್ದ ಲಕ್ಷ್ಮಣ ನಾಯ್ಕ ಅವರ ಕುಟುಂಬ ಮತ್ತು ಕೇರಳ(KERAL) ಮೂಲದ ಅರ್ಜುನ್(ARJUN), ಜಗನ್ನಾಥ ನಾಯ್ಕ, ಲೋಕೇಶ್ ನಾಯ್ಕ ಹೀಗೆ ನಾಪತ್ತೆಯಾದವರ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಟ್ಟು 11 ಜನರು ಮೃತರಾಗಿದ್ದರು.
ಕೇರಳ ರಾಜ್ಯದ ಚಾಲಕ ಅರ್ಜುನ್ ಇರುವಂತ ಭಾರತ್ ಬೆಂಜ್ ಟ್ರಕ್ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಅರ್ಜುನ್ ಲೊಕೇಶನ್ ಹಿಡಿದು ಕೇರಳದ ಜನರು ರಂಪಾಟವನ್ನೇ ನಡೆಸಿದ್ದರು. ಅರ್ಜುನ್ ಬದುಕಿದ್ದಾನೆ ರಕ್ಷಿಸಿ ಎಂಬ ಒತ್ತಾಯ ಮೊಳಗಿತ್ತು.
ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ನಾಪತ್ತೆಯಾದ ಅರ್ಜುನ್ ಮತ್ತು ಜಗನ್ನಾಥ, ಲೋಕೇಶ್ ಬದುಕಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು. ಇಂದು ನದಿಯಲ್ಲಿ ಶೋಧ ನಡೆಸಿದ ಮುಳುಗುತಜ್ಞರಿಗೆ ಭಾರತ್ ಬೆಂಜ್ ವಾಹನ ಗೋಚರಿಸಿದೆ. ಅದರೊಳಗೆ ಅರ್ಜುನ್ ಮೃತದೇಹ ಇರುವುದನ್ನ ಖಚಿತಪಡಿಸಿಕೊಂಡು ಜಿಲ್ಲಾಡಳಿತಕ್ಕೆ ಸುದ್ದಿ ತಲುಪಿಸಲಾಯಿತು.
ಮಧ್ಯಾಹ್ನ ವೇಳೆ ಕ್ರೇನ್ ಗಳ ಮೂಲಕ ಭಾರತ್ ಬೆಂಜ್ ಟ್ರಕ್ ಮೇಲಕ್ಕೆ ಎತ್ತಲಾಯಿತು. ದುರ್ದೈವಶಾತ್ ಚಾಲಕ ಅರ್ಜುನ ಶವವಾಗಿ ಪತ್ತೆಯಾಗಿದ್ದಾನೆ. ಕೊನೆಗೂ ಕೇರಳ ಜನರ ಪ್ರಾರ್ಥನೆ ಫಲಿಸಲಿಲ್ಲ. ಸುಮಾರು 70 ದಿನಗಳ ಬಳಿಕ ಅರ್ಜುನ್ ಮತ್ತು ಟ್ರಕ್ ಪತ್ತೆ ಮಾಡಲಾಗಿದೆ. ಕಾರವಾರ ಶಾಸಕ ಸತೀಶ್ ಸೈಲ್ ಅವರ ವಿಶೇಷ ಆಸಕ್ತಿಯಿಂದ ಜಿಲ್ಲಾಡಳಿತ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನು ಓದಿ : ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವು
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ