ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಆಗ್ರಾ(Aagra):  ನದಿಯಲ್ಲಿ ಸ್ನಾನ ಮಾಡುತ್ತಾ,  ರೀಲ್ಸ್ ಮಾಡುತ್ತಿದ್ದ ಆರು ಮಂದಿ ಬಾಲಕಿಯರು  ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ(Tragedy)ಮಂಗಳವಾರ ನಡೆದಿದೆ.

ಯಮುನಾ ನದಿಯಲ್ಲಿ(Yamuna River) ಈ ಘಟನೆ ನಡೆದಿದ್ದು, ಇಡೀ ಗ್ರಾಮವೇ ತಲ್ಲಣಗೊಂಡಿದೆ.  ನದಿ ಬದಿಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಈ ಬಾಲಕಿಯರು, ತಮ್ಮ ಕೆಲಸ ಮುಗಿದ ನಂತರ, ಬಿಸಿಲಿನ ಝಳದಿಂದ ತಮ್ಮನ್ನು ತಂಪು ಮಾಡಿಕೊಳ್ಳಲೆಂದು ನದಿಗೆ ಇಳಿದಿದ್ದರು ಎನ್ನಲಾಗಿದೆ.

ನೋಡಿದವರು ಹೇಳುವ ಪ್ರಕಾರ,  ನದಿಯ ಸುಳಿಯಲ್ಲಿ ಕೊಚ್ಚಿಕೊಂಡು ಹೋಗುವುದಕ್ಕೂ ಮುನ್ನ ಅವರು ನದಿ ದಂಡೆಯ ಬಳಿ ಆಟವಾಡುತ್ತಾ, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ನಾಲ್ವರು ಬಾಲಕಿಯರು ನದಿಯಲ್ಲಿ ಮುಳುಗಿ ಹೋಗಿದ್ದು, ಇಬ್ಬರನ್ನು ರಕ್ಷಿಸಿ, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರಿಬ್ಬರೂ ಮೃತಪಟ್ಟಿದ್ದಾರೆ. ಇದರಿಂದಾಗಿ, ನದಿ ನೀರಿನಲ್ಲಿ ಮುಳುಗಿ ಆರು ಜನರು ಮೃತಪಟ್ಟಿದ್ದಾರೆ.

ಮೃತ  ಆರು ಬಾಲಕಿಯರೂ ಒಂದೇ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದಾರೆ. ಅವರೆಲ್ಲರೂ ಸಮೀಪದ ಗ್ರಾಮವೊಂದರ ನಿವಾಸಿಗಳು. ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ಒದಗಿಸಲಾಗುವುದು ಹಾಗೂ ಈ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಗ್ರಾಮ ಶೋಕತಪ್ತವಾಗಿದೆ.

ಇದನ್ನು ಓದಿ: ಕಾಲ್ತುಳಿತ ಪ್ರಕರಣ. ಮ್ಯಾಜಿಸ್ಟ್ರೇಟ್  ತನಿಖೆಗೆ ಆದೇಶ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ :ಸಿಎಂ.ಸಿದ್ದರಾಮಯ್ಯ

ಚಿನ್ನಕ್ಕೆ ಮುತ್ತಿಕ್ಕಿದ ಬೆಳ್ಕೆಯ ಶಿವಾನಂದ ಮೊಗೇರ.