ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಪಶ್ಚಿಮ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 9ನೇಯ ದಕ್ಷಿಣ ಏಷ್ಯಾ ಅಟ್ಯಾ-ಪಾಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಕೆಯ ಶಿವಾನಂದ ಮೊಗೇರ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ.

ಶಿವಾನಂದ ಅವರು ಅಟ್ಯಾಪಟ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಹಲವು ವರ್ಷಗಳಿಂದ ಅಟ್ಯಾಪಟ್ಯಾ ಆಟದ ಸಕ್ರಿಯ ಆಟಗಾರರಾಗಿ, ಸದ್ರಿ ಆಟದ ತರಬೇತುದಾರರಾಗಿಯೂ ಕಾರ್ಯ ನಿರ್ವಹಿಸಿ ಅವರು ಪ್ರತಿನಿಧಿಸಿದ  ಅಂತಾರಾಷ್ಟ್ರೀಯ ತಂಡವು ಪ್ರಥಮ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯ ಸಂಸ್ಥೆಯ ಅಧ್ಯಕ್ಷರು, ಸಭಾಪತಿಗಳಾದ  ಬಸವರಾಜ್ ಹೊರಟ್ಟಿ  ಮತ್ತು ಭಟ್ಕಳ ತಾಲೂಕು ಅಟ್ಯಾ-ಪಾಟ್ಯಾ ಫೆಡರೇಷನ್‌ ಅಧ್ಯಕ್ಷರು ಮತ್ತು ಜಿಲ್ಲಾ ಪೋಷಕರು,  ಸಚಿವರಾದ ಮಂಕಾಳ ಎಸ್. ವೈದ್ಯ   ಮತ್ತು ಭಟ್ಕಳ ತಾಲೂಕು ಅಟ್ಯಾ-ಪಾಟ್ಯಾ ಫೆಡರೇಷನ್‌ ಪೋಷಕರು, ದಕ್ಷಿಣ ಆಫ್ರಿಕಾದ ಸಿ.ಇ.ಒ ಸಿನ್ಹಾ ಡಾಟಾ ಮತ್ತು ಕಂಪ್ಯೂಟರ್  ನಿರ್ದೇಶಕರಾದ  ಲಚ್ಚಯ್ಯ ಕೆ. ಸಿದ್ಧನಮನೆ, ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಮಾದೇವ ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಅಣ್ಣಪ್ಪ ಎನ್. ನಾಯ್ಕ ಹಾಗೂ ಬ್ಯಾಂಕಿನ ಉಪಾಧ್ಯಕ್ಷರಾದ ಪಾಂಡು ಜಿ. ನಾಯ್ಕ ಹಾಗೂ ನಿರ್ದೇಶಕರಾದ ಲಕ್ಷ್ಮೀ ನಾರಾಯಣ ಎಂ. ನಾಯ್ಕ ಹಾಗೂ ಸಂಸ್ಥೆಯ ಎಲ್ಲಾ ನಿರ್ದೇಶಕರು ಹಾಗೂ ಅಭಿನಂದಿಸಿದ್ದಾರೆ.

ಇದನ್ನು ಓದಿ : ಅಪರಿಚಿತ ವಾಹನ ಡಿಕ್ಕಿ. ಹೆದ್ದಾರಿಯಲ್ಲಿ ಜಿಂಕೆ ಸಾವು

ಕನ್ನಡದ ಬಗ್ಗೆ ಹಗುರ ಮಾತು. ನಟ ಕಮಲ್ ಹಾಸನ್ ಗೆ ಹೈಕೋರ್ಟ್ ತರಾಟೆ.