ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಚಿತ್ರದುರ್ಗದ ಹಿರಿಯೂರಿನಲ್ಲಿ ಸಂಭವಿಸಿದ ದುರಂತದಲ್ಲಿ(Hiriyuru Tragedy)  ಮೃತಪಟ್ಟ  ತಾಲೂಕಿನ ಶಿರಾಲಿಯ(Shirali) ನಿವಾಸಿ ರಶ್ಮಿ ಮಹಾಲೆ  ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ‌.

ದುರಂತ ನಡೆದಾಕ್ಷಣ  ಚಿತ್ರದುರ್ಗಕ್ಕೆ ತೆರಳಿದ್ದ ರಶ್ಮಿಯ ತಂದೆ ರತ್ನಾಕ‌ರ್ ಮಹಾಲೆ ಮಗಳ ಗುರುತು‌ ಸಿಗದೇ ವಾಪಾಸ್ಸಾಗಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ  ಡಿ.ಎನ್.ಎ(DNA) ಪರೀಕ್ಷೆಗಾಗಿ ಅವರ ರಕ್ತ ಮಾದರಿ ಪಡೆಯಲಾಗಿದೆ. ಸಂಪೂರ್ಣ ಸುಟ್ಟು ಹೋಗಿದ್ದರಿಂದ ಮೃತದೇಹ ಗುರುತಿಸಲಾಗದೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಡಿಸೆಂಬರ್ 25 ರಂದು ಬೆಳಿಗ್ಗೆ ಸೀಬರ್ಡ್ ಬಸ್ ಗೆ(Seabird Bus) ಬೆಂಕಿ(Fire) ಹೊತ್ತುಕೊಂಡು  ರಶ್ಮಿ ಮೃತಪಟ್ಟಿದ್ದಾರೆ. ಜೀವನದ ಆಸೆಯನ್ನ ಹೊತ್ತು ಬೆಂಗಳೂರು ಸೇರಿದ್ದ  ಪುತ್ರಿಯ ಅಕಾಲಿಕ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಸಜೀವ ದಹನವಾದ ರಶ್ಮಿ ಮನೆಗೆ ಸಂಸದ ವಿಶ್ವೇಶ್ವರ ಹೆಗಡೆ(MP Vishweshwar Hegade) ಭೇಟಿ  ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ​ಮಗಳ ಅಗಲಿಕೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಪೋಷಕರಿಗೆ ಧೈರ್ಯ ತುಂಬಿದ ಸಂಸದರು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಬದುಕಿ ಬಾಳಬೇಕಾಗಿದ್ದ, ಸುಂದರ ಭವಿಷ್ಯವನ್ನು ಹೊಂದಿದ್ದ ಯುವತಿಯೊಬ್ಬಳು ಇಂತಹ ಭೀಕರ ದುರಂತಕ್ಕೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಎಸ್. ಹೆಗಡೆ, ಪ್ರಮುಖರಾದ ಗೋವಿಂದ ನಾಯ್ಕ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.

ಇದನ್ನು ಓದಿ : ಬಟ್ಟೆ ಬದಲಿಸುವಾಗ ನರ್ಸ್ ಗಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆಸಾಮಿ. ಪೊಲೀಸರಿಂದ ಬಂಧನ

ಭೀಕರ ಅಪಘಾತ. ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ಬೆಂಕಿ. 9ಪ್ರಯಾಣಿಕರ ಸಜೀವ ದಹನ.