ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬಾಗಲಕೋಟ(Bagalakot): ಸ್ವಾಮೀಜಿಯ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ ಆರು ಜನ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡ (Transfer) ಘಟನೆ ನಡೆದಿದೆ.
ಬಾದಾಮಿಯಲ್ಲಿ ಇತ್ತೀಚಿಗೆ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಅವರಿಗೆ ಸಮವಸ್ತ್ರ(Uniform) ಧರಿಸಿಕೊಂಡೇ ಕೆಲ ಪೊಲೀಸರು ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದರು. ಸ್ವಾಮೀಜಿಯವರು ಆಶೀರ್ವಾದ ರೂಪದಲ್ಲಿ ಹಣ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸ್ ಸಮವಸ್ತ್ರದಲ್ಲಿದ್ದಾಗ(Police Uniform) ಕಾಲಿಗೆ ಬಿದ್ದು ನಮಸ್ಕರಿಸಬಾರದು. ಸಲ್ಯೂಟ್ ಹೊಡೆಯಿರಿ ಸಾಕು. ಆಶೀರ್ವಾದ ರೂಪದಲ್ಲಿ ನೀಡಿದ ಹಣ ಖರ್ಚು ಮಾಡಬೇಡಿ. ಪೂಜೆ ಮಾಡಿ. ಒಳ್ಳೆಯದಾಗುತ್ತದೆ ಎಂದು ಸ್ವಾಮೀಜಿ ಹೇಳಿದ ಮಾತು ವಿಡಿಯೋದಲ್ಲಿತ್ತು.
ಹೀಗಾಗಿ ಇಲಾಖೆಯಿಂದ ಬಾದಾಮಿ ಪೊಲೀಸ್ ಠಾಣೆಯ(Badami Police Station) ಎಎಸ್‌ಐ ಜಿ.ಬಿ. ದಳವಾಯಿ, ಎಎಸ್‌ಐ ಡಿ.ಜಿ. ಶಿವಪುರ. ಕಾನ್‌ಸ್ಟೆಬಲ್‌ಗಳಾದ ಎಸ್.ಪಿ. ಅಂಕೋಲೆ, ಜಿ.ಬಿ. ಅಂಗಡಿ, ರಮೇಶ ಇಳಗೇರ, ಎಂ.ಎಸ್ ಹುಲ್ಲೂರ ವರ್ಗಾವಣೆಯಾಗಿದ್ದಾರೆ.
ಇದನ್ನು ಓದಿ : ಈರಯ್ಯ ಬೇಡುಮನೆ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಧಾನ.