ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಅನೇಕ ಸೂಪರ್ ಹಿಟ್(Super Hit) ಚಿತ್ರಗಳಲ್ಲಿ ತಮ್ಮ ಶಕ್ತಿಶಾಲಿ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಕನ್ನಡ ಚಿತ್ರರಂಗದ(Kannada Film Industry) ಖ್ಯಾತ ಖಳನಟ ಹರೀಶ್ ರಾಯ್(Harish Roy) ದೀರ್ಘಕಾಲದ ಅನಾರೋಗ್ಯದಿಂದ  ಇಂದು ನಿಧನ ಹೊಂದಿದ್ದಾರೆ.

ಹರೀಶ್ ರಾಯ್(Harish Roy) ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ರಾಯ್  ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸುತ್ತಿದ್ದರು. ಅನಾರೋಗ್ಯದಿಂದ ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತಾಗಿದ್ದರು. ಚಿಕಿತ್ಸೆಗಾಗಿ ಅವರು ಸಹಾಯ ಯಾಚಿಸಿದ್ದರು. ಅವರ ಪರಿಸ್ಥಿತಿ ಕಂಡು ನಿರ್ಮಾಪಕ(Producer) ಉಮಾಪತಿ ಶ್ರೀನಿವಾಸ್‌, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ತಮಗೆ ಸಹಾಯ ಮಾಡಿರುವುದಾಗಿ ಸ್ವತಃ ಹರೀಶ್ ರಾಯ್ ಹೇಳಿದ್ದರು.

ಕರಾವಳಿಯ(Coastal)  ಮೂಲಕ ಹರೀಶ್ ರಾಯ್ ಅವರು 90ರ ದಶಕದ ಹಲವಾರು ಸಿನಿಮಾಗಳಲ್ಲಿ ವಿಲನ್(Wilon) ಆಗಿ ಮಿಂಚಿದವರು. ನಿಜ ಜೀವನದಲ್ಲಿಯೂ ಸಹ ಪ್ರಕರಣ ಒಂದರಲ್ಲಿ ಹರೀಶ್ ರಾಯ್ ಅವರು ಜೈಲು ಸೇರಿದ್ದರು. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಹರೀಶ್ ರಾಯ್, ತಮ್ಮ ಜೈಲು ದಿನಗಳನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದರು.

ನಟ ಹರೀಶ್ ರಾಯ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಓಂ(Om), ರಾಜ್ ಬಹುದ್ದೂರ್(Raj Bahuddur),  ಅಂಡರ್ ವರ್ಲ್ಡ್(Under world), ಮೀಂದುಮ್ ಒರು ಕಾದಲ್ ಕಧ್ಯೆ, ಸಂಜು ವೆಡ್ಸ್ ಗೀತಾ(Sanju weds Geeta), ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ,  ತಾಯವ್ವ   ಹಾಗೂ ಸ್ಯಾಂಡಲ್ ವುಡ್‌ನ ಟಾಪ್ ಸಿನಿಮಾ(Sandalwood Top Cinema) ಕೆಜಿಎಫ್ ಚಾಪ್ಟರ್ 1(KGF) ಹಾಗೂ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸಿದ್ದರು. ಉತ್ತಮ ನಟನೋರ್ವನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ.

ಇದನ್ನು ಓದಿ : ಜೋಯಿಡಾ ತಾಲೂಕಿನಲ್ಲಿ ಹೈನಾ ಪ್ರಾಣಿ ಪ್ರತ್ಯಕ್ಷ

ಭಟ್ಕಳ ಗ್ರಾಹಕರಿಗೆ ಮಕ್ಮಲ್ ಟೋಪಿ. ತಿಂಗಳ ಹಿಂದೆ ಎಚ್ಚರಿಸಿದರೂ ಎಚ್ಚೆತ್ತುಕೊಳ್ಳದ ಇಲಾಖೆ.

ಯುಟ್ಯೂಬರ್ ಮುಕಳೆಪ್ಪ ಕೊಟ್ಟ ಕಷಾಯ ಹಿನ್ನಲೆ. ಉಪನೋಂದಣಾಧಿಕಾರಿ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ.

ರಾಷ್ಟ್ರಗೀತೆಗೆ ಅವಮಾನ? — ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಚರ್ಚಾಸ್ಪದ ಹೇಳಿಕೆ.

ಅಕ್ರಮ ಗೋವಾ ಸಾಗಾಟ. ಕಾರವಾರದ ಮೂವರ ಬಂಧನ