ಕೋಯಿಕ್ಕೋಡ್(KOYIKKOD) : ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ(SHIRURU LANDSLIDE) ಮೃತಪಟ್ಟ ಕೇರಳದ ಕಣ್ಣೂರಿನ ಚಾಲಕ ಅರ್ಜುನ್ ಸಹೋದರಿ ಟ್ರಕ್ ಮಾಲೀಕನ ಮೇಲೆ ದೂರು ದಾಖಲಿಸಿದ್ದಾರೆ.
ಅರ್ಜುನ್ ಸಹೋದರಿ ಅಂಜು, ಲಾರಿ ಮಾಲೀಕ ಮುನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಮುನಾಫ್ ಮೃತ ಸಹೋದರನ ಫೋಟೊ ಬಳಸಿ ಯೂಟ್ಯೂಬ್ ಚಾನೆಲ್(YOUTUBE CHANNEL) ಪ್ರಾರಂಭಿಸಿ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅಂಜು ದೂರಿನಲ್ಲಿ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ(SOCIAL MEDIA) ಕುಟುಂಬದ ಬಗ್ಗೆ ಮಾನಹಾನಿ ಪ್ರಚಾರ ಮಾಡುತ್ತಿರುವವರ ವಿರುದ್ಧವೂ ಚೆರುವಾಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದರಿಂದ, ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಸೈಬರ್(CYBER) ದಾಳಿ ನಡೆಸಲು ಸಮುದಾಯದ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಪರಿಸ್ಥಿತಿಯನ್ನು ಮನಾಫ್ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಅಂಜು ತಿಳಿಸಿದ್ದಾರೆ.
ತಮ್ಮ ಕುಟುಂಬದ ಪರಿಸ್ಥಿತಿಯನ್ನು ಮುನಾಫ್ ವೈಯಕ್ತಿಕ ಲಾಭಕ್ಕಾಗಿ ಬಳಸುತ್ತಿದ್ದರಲ್ಲದೆ, ಹಣವನ್ನೂ ಸಂಗ್ರಹಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಮಾಧ್ಯಮಗೋಷ್ಠಿ ಮೂಲಕ ತಿಳಿಸಿದ್ದಾರೆ. ಅವರು ತಮ್ಮ ಕುಟುಂಬವನ್ನ ನಿರ್ಗತಿಕರು ಎಂದು ನಿರೂಪಿಸುತ್ತಿರುವುದು ಕುಟುಂಬಸ್ಥರಿಗೆ ನೋವುಂಟುಮಾಡಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.
ಕುಟುಂಬದವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುನಾಪ್ ತಾನೇನು ಈ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡಲು ಬಯಸುವುದಿಲ್ಲ. ತಾನು ಮಾಡಿದ್ದು ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಶಿರೂರಿನ ದುರಂತದಲ್ಲಿ ಗಂಗಾವಳಿ ನದ ಬಿದ್ದಿದ್ದ ಲಾರಿ ಹಾಗೂ ಮೃತದೇಹ ಹೊರತೆಗೆಯವ ಕಾರ್ಯಾಚರಣೆ ಸಂದರ್ಭದಲ್ಲಿ ಮಾಲೀಕ ಮುನಾಪ್ ಉತ್ತರಕನ್ನಡ(UTTARKANNADA) ಮತ್ತು ಕೇರಳ ಸರ್ಕಾರದ(KERAL GOVERNMENT) ದಿಕ್ಕು ತಪ್ಪಿಸಿದ್ದರಿಂದ ಕಾರ್ಯಾಚರಣೆ ವಿಳಂಭವಾಗಿದೆ ಎಂಬ ಆರೋಪವು ಕೇಳಿ ಬಂದಿತ್ತು. ಮಾಧ್ಯಮಗಳಿಗೂ ಸಹ ತಪ್ಪು ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನು ಓದಿ :
ರಾಜ್ಯ ಮಟ್ಟದ ಷರೀಫ್ ಸಾಹಿತ್ಯ ಪ್ರಶಸ್ತಿಗೆ ಕಥಾ ಸಂಕಲನ ಅಹ್ವಾನ