ಬೆಂಗಳೂರು(BANGLORE): ಸರ್ಕಾರದಿಂದ ರಾತ್ರೋರಾತ್ರಿ ಪೊಲೀಸ್ ಇಲಾಖೆಯ (Karnataka State Police ) ಮೇಜರ್ ಸರ್ಜರಿ ಮಾಡಿದೆ.
ಒಟ್ಟು 25 ಮಂದಿ ಐಪಿಎಸ್ (IPS) ಅಧಿಕಾರಿಗಳ (OFFICERS) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರಕನ್ನಡ (UTTARKANNADA)ಎಸ್ಪಿ ಎನ್ ವಿಷ್ಣುವರ್ಧನ್ ಅವರನ್ನು ಮೈಸೂರಿಗೆ ವರ್ಗಾಯಿಸಿ ಅವರ ಸ್ಥಾನಕ್ಕೆ ಕೋಲಾರದಲ್ಲಿ ಎಸ್ಪಿ ಆಗಿದ್ದ ನಾರಾಯಣ ಎಂ ಅವರನ್ನ ನೇಮಕಗೊಳಿಸಿ ಅದೇಶಿಸಿಸಲಾಗಿದೆ.
ನಾರಾಯಣ ಎಂ ಅವರು 2014 ರ ಬ್ಯಾಚ್ ನ ಅಧಿಕಾರಿಯಾಗಿದ್ದು ಈ ಹಿಂದೆ ಭಟ್ಕಳದಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಜಿಲ್ಲೆಯ ಪರಿಪೂರ್ಣ ಮಾಹಿತಿ ಅವರಿಗಿದೆ.
ಇನ್ನೂ ದಕ್ಷಿಣಕನ್ನಡ (SOUTH CANARS) ಎಸ್ಪಿ ಯಾಗಿದ್ದ ಸಿ ಬಿ ರಿಂಷತ್ ಅವರನ್ನ ಬೆಂಗಳೂರು (BANGLORE) ವೈರಲೇಸ್ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಮಂಡ್ಯದಲ್ಲಿ ಕಾರ್ಯ ನಿರ್ವಹಿಸಿದ್ದ ಯತೀಶ್ ಎನ್ ಅವರನ್ನ ನೇಮಿಸಲಾಗಿದೆ.
ಯಾರ್ಯಾರುಎಲ್ಲಿಗೆ?
ಲಾಬೂ ರಾಮ್ -ಐಜಿಪಿ (IGP) ಕೇಂದ್ರ ವಲಯ, ಕೆ. ತ್ಯಾಗರಾಜನ್ – ಐಜಿಪಿ, ಐ.ಎಸ್.ಡಿ., ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ, ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್, ಬಿ. ರಮೇಶ – ಡಿಐಜಿಪಿ, ಪೂರ್ವ ವಲಯ, ದಾವಣಗೆರೆ, ಸೀಮಾ ಲಾಟ್ಕರ್ ಪೊಲೀಸ್ ಆಯುಕ್ತರು, ಮೈಸೂರು ನಗರ, ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ, ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ, ಸುಮನ್ ಡಿ. ಪೆನ್ನೇಕರ್ -ಎಸ್ಪಿ, ಬಿಎಂಟಿಎಫ್. ಚನ್ನಬಸವಣ್ಣ – ಎಐಜಿಪಿ, ಆಡಳಿತ, ಡಿಜಿ ಕಚೇರಿ.