ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ಜನಮಾನಸದಲ್ಲಿ ಹೆಸರಾಗಿದ್ದ ಮುಂಡಳ್ಳಿಯ ಎಲ್ ಎಸ್ ನಾಯ್ಕ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಕೃಷಿ ಕುಟುಂಬದಿಂದ(Agriculture Family) ಬಂದಿದ್ದ ಅವರಿಗೆ ಹತ್ತು ಜನ ಮಕ್ಕಳಿದ್ದರು. ಸದಾ ಹೋರಾಟದ ಮನೋಭಾವ ಹೊಂದಿದ್ದ ಅವರು ಮೊನ್ನೆ ಮೊನ್ನೆ ವರೆಗೂ ಸಕ್ರೀಯರಾಗಿದ್ದರು. ಕೆಲ ದಿನಗಳ ಹಿಂದೆ ಪ್ರತಿಕೂಲ ವಾತಾವರಣದಿಂದಾಗಿ ಅವರು ಅನಾರೋಗ್ಯಕ್ಕೀಡಾಗಿದ್ದರು. ಅವರನ್ನ ಉಡುಪಿಯ ಖಾಸಗಿ ಆಸ್ಪತ್ರೆಗೆ(Udupi Private Hospital) ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ(Former CM Bangarappa) ಆಪ್ತರಾಗಿದ್ದ ಎಲ್ ಎಸ್ ನಾಯ್ಕ ನಾಲ್ಕು ದಶಕಗಳ ಹಿಂದೆ ರಾಜಕೀಯ ನೇತಾರರಾಗಿ ಗುರುತಿಸಿಕೊಂಡಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷರಾಗಿ(Taluku Panchayat President)   ಜನಸಾಮಾನ್ಯರ ಕಲ್ಯಾಣಕ್ಕಾಗಿ ಶ್ರಮಿಸಿದ್ದರು.

   ಕೊಡುಗೈ ದಾನಿಯಾಗಿದ್ದ  ಎಲ್ ಎಸ್ ನಾಯ್ಕ ಅವರು ಊರಲ್ಲಿ ನಡೆಯುವ ಸಭೆ-ಸಮಾರಂಭ, ಸಂಘ-ಸಂಸ್ಥೆಗಳ ಕಟ್ಟಡ, ಚಿಕ್ಕ ಪುಟ್ಟ ದೇವಸ್ಥಾನದ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದರು.  “ಆಡು ಮುಟ್ಟದ ಸೊಪ್ಪಿಲ್ಲ  ಎಲ್ ಎಸ್ ನಾಯ್ಕ ನೀಡದ ದೇಣಿಗೆಯಿಲ್ಲ” ಅಂತ ಜನ ಆಡಿಕೊಳ್ಳುತ್ತಿದ್ದರು. ಕಷ್ಟ ಅಂತ ಬಂದವರಿಗೆ ಅವರ ಹಸ್ತ ಸದಾ ಮುಂದಿರುತಿತ್ತು.
     
ಭಟ್ಕಳ ನಾಮಧಾರಿ ಸಮಾಜದ(Namadhari Community) ಗುರು ಪೀಠ ಕಟ್ಟಲು ತಮ್ಮ ಸ್ವಂತ ಜಮೀನು ಉಚಿತವಾಗಿ ನೀಡಿದ್ದರು. ದೇವಸ್ಥಾನದ ಪ್ರಥಮ ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಕಟ್ಟಡದ ಸಂಪೂರ್ಣ ಜಲ್ಲಿಯನ್ನು ಇವರು  ನೀಡಿರುವುದನ್ನು ಭಕ್ತರು  ಸ್ಮರಿಸಿಕೊಳ್ಳುತ್ತಿದ್ದಾರೆ.

ನಾಮಧಾರಿ ಸಮಾಜದ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವರಿಗೆ ಬೆಳ್ಳಿಯ ಪಾಲಕಿ, ಶ್ರೀ ದೇವರಿಗೆ ಬಂಗಾರದ ಕಿರೀಟ ಸಮರ್ಪಿಸಿದ ಸೇವೆ,   ಕರಿಕಲ್ ನಲ್ಲಿರುವ ಧ್ಯಾನ ಮಂದಿರಕ್ಕೆ  ಭೂಮಿಯನ್ನು ದಾನವಾಗಿ ಕೊಟ್ಟ ಸೇವಾಕಾರ್ಯವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ.

ಅವರ ನಿಧನದಿಂದಾಗಿ  ಗಟ್ಟಿತನ, ದಿಟ್ಟತನ, ನೇರ ನಡೆ ನುಡಿಯ ವ್ಯಕ್ತಿತ್ವದ ನಾಮಧಾರಿ ಸಮಾಜದ  ಹಿರಿಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ಅವರ ಆತ್ಮಕ್ಕೆ  ಸದ್ಗತಿ ದೊರಕಲಿ. ಅವರ ಕುಟುಂಬಕ್ಕೆ ಆಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಎಂದು ನಾಮಧಾರಿ ಸಮಾಜದ  ಮುಖಂಡರು, ಅವರನ್ನ ಬಲ್ಲ ಸರ್ವ ಸಮಾಜದ  ಹಿರಿಯರು  ಪ್ರಾರ್ಥನೆ ಮಾಡಿದ್ದಾರೆ. 
ಇದನ್ನು ಓದಿ : ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್. ಎರಡು‌ ತಾಸು‌ ಬಸ್ನಲ್ಲಿ ಸಿಲುಕಿದ ಬಾಲಕ. ಹಲವರಿಗೆ ಗಾಯ

ಸಾಮೂಹಿಕವಾಗಿ ಸರಳ ವಿವಾಹ ಮಾಡಿಸಿ ಪ್ರೋತ್ಸಾಹ ಧನ ಪಡೆಯಿರಿ.