ಶಿರಸಿ(Sirsi) : ರಾಜ್ಯ ಮಟ್ಟದ(State Level) ಪದವಿಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿ (chess compitation) ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ (dr B R Ambedkar Bhavan) ಚಾಲನೆ ದೊರೆತಿದೆ.
ಶಿರಸಿ ಶಾಸಕ ಭೀಮಣ್ಣ ನಾಯ್ಕ (Sirsi MLA Bheemanna Naik) ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಶಿರಸಿ ಜನರಿಗೆ ಈ ಹಿಂದೆ ಅನೇಕ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ನಡೆಸಿಕೊಟ್ಟ ಅನುಭವ ಇದೆ. ಹೀಗಾಗಿ ಪಂದ್ಯಾವಳಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಕ್ಕಳು ಸಮಧಾನದಿಂದ ಆಟವಾಡಿ ಈ ಒಂದು ವೇದಿಕೆಯನ್ನು ಬಳಸಿಕೊಂಡು ಮಕ್ಕಳು ದೇಶ ಮತ್ತು ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದು ಭವಿಷ್ಯದಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನು ಅಲಂಕರಿಸಿ ತಂದೆ ತಾಯಿಯರ ಪ್ರೀತಿಯನ್ನು ಗಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪವಿಭಾಗ ಅಧಿಕಾರಿ ಕಾವ್ಯಾರಾಣಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ರಾಚಪ್ಪ ಕೆ ಎಸ್ ಉಪ ನಿರ್ದೇಶಕರು ಶಿಕ್ಷಣ ಇಲಾಖೆ ಕಾರವಾರ, ಶ್ರೀ ಮಾರಿಕಾಂಭಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಭಟ್ಟ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಕಾರವಾರ, ಹಾಗೂ ಶ್ರೀ ಮಾರಿಕಾಂಭಾ ಸರಕಾರಿ ಪದವಿಪೂರ್ವ ಕಾಲೇಜು ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ನಡೆಯುತ್ತಿದೆ. ಸುಮಾರು ಮುನ್ನುರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.
ಇದನ್ನು ಓದಿ : ಮೂರು ದಿನವಾದರೂ ಸ್ಥಳದಿಂದ ಕದಲದ ಕೋಳಿ ಅಚ್ಚರಿ
ಮತ್ತೋರ್ವ ಸರ್ಕಾರಿ ನೌಕರನ ಆತ್ಮಹತ್ಯೆ
ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲೀಕನಿಗೆ ಬರೋಬ್ಬರಿ ದಂಡ
ಕಾಡು ಕುರಿ ಮಾಂಸ ಹಂಚಲು ತೆರಳುತ್ತಿದ್ದ ಇಬ್ಬರ ಬಂಧನ