ಯಲ್ಲಾಪುರ: ನಿನ್ನೆಯಷ್ಟೆ ಯಲ್ಲಾಪುರ ಪಟ್ಟಣ ಪಂಚಾಯತದ ಹತ್ತು ತಿಂಗಳ ಅವಧಿಯ ನೂತನ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡ ನರ್ಮದಾ ರವಿಂದ್ರ ನಾಯ್ಕ ಇಂದು ಪಟ್ಟಣ ಪಂಚಾಯತ ಕ್ಕೆ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದರು.
ಕಳಪೆ ಕಾಮಗಾರಿ ಆರೋಪ ಬಂದ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟಿನ್ ಗೆ ಧೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದಿರಾ ಕ್ಯಾಂಟಿನ್ ಮೇಲ್ಚಾವಣಿಯು ಪಟ್ಟಣ ಪಂಚಾಯತ ನಿಧಿಯಿಂದ 6 ಲಕ್ಷ ರೂಪಾಯಿ ಬಳಸಿ ಕಳಪೆಯಾಗಿ ನಿರ್ಮಿಸಿರುವ ದೂರುಗಳು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಬರುತಿದ್ದವು. ಇ ಹಿನ್ನಲೆಯಲ್ಲಿ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಶಾಲಾ ಮಕ್ಕಳ ಬಳಿ ಊಟದ ರುಚಿಯ ಕುರಿತು ವಿಚಾರಿಸಿ ಅಡುಗೆ ಕೊಣೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ್ ನಲ್ಲಿ ಪ್ರತಿನಿತ್ಯ ನೂರಾರು ಜನರು ಊಟ ಮಾಡುತ್ತಿದ್ದು ಇಲ್ಲಿನ ಗ್ರೈಂಡರ್ , ಪ್ರೀಜ್ , ಗ್ಯಾಸ್ ಓಲೆ , ಪಿಲ್ಟರ್ ಗಳು ಹಾಳಾಗಿರುವುದನ್ನ ಗಮನಿಸಿದರು. ಲಕ್ಷಾಂತರ ಮೌಲ್ಯದ ಪಾತ್ರೆಗಳು ಒಳಗಡೆ ಇದ್ದು, ಬಾಗಿಲುಗಳು ಮುರಿದು ಬಿದ್ದ ಸ್ಥಿತಿಯಲ್ಲಿದ್ದವು. ಹೀಗಾಗಿ ಮೂಲಸೌಕರ್ಯ ಗಳನ್ನ ತಕ್ಷಣ ಪಟ್ಟಣ ಪಂಚಾಯತ ನಿಧಿಯಿಂದ ಸರಿಪಡಿಸುವಂತೆ ಸೂಚಿಸಿದರು.
ಶಾಲಾ ಮಕ್ಕಳ ಜೊತೆ ಅಧ್ಯಕ್ಷೆ ನರ್ಮದಾ ನಾಯ್ಕ , ಪ ಪಂ ಸದಸ್ಯರಾದ ಸತೀಶ ನಾಯ್ಕ , ರಾಜು ನಾಯ್ಕ ಅವರು ಊಟ ಮಾಡಿ ಗುಣಮಟ್ಟ ತಿಳಿದುಕೊಂಡರು.
ಪಟ್ಟಣ ಪಂಚಾಯತ ನಿಧಿಯಿಂದ ನಿರ್ಮಿಸಿದ 6 ಲಕ್ಷ ಮೌಲ್ಯದ ಮೇಲ್ಚಾವಣಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇಂದಿರಾ ಕ್ಯಾಂಟಿನ್ ಕಟ್ಟಡದ ಸಮಾನಂತರವಾಗಿ ಮೆಲ್ಚಾವಣೆ ನಿರ್ಮಿಸಿದ್ದು 8 ಅಡಿ ಎತ್ತರದಲ್ಲಿ ನಿರ್ಮಿಸಿದ್ದು ಮಳೆ ನೀರು ಸಂಪೂರ್ಣ ಓಳಬರುವಂತೆ ನಿರ್ಮಿಸಿದ್ದಲ್ಲದೆ ಹೊರಭಾಗದಲ್ಲಿ ಇರುವ ಟೇಬಲ್ ಗಳಿಗೆ ಯಾವದೆ ರೀತಿಯ ಉಪಯೋಗವಾಗದನ್ನು ನೋಡಿದ ನರ್ಮದಾ ನಾಯ್ಕ ಗುತ್ತಿಗೆದಾರರಿಗೆ ನೀಡಿದ ವರ್ಕ್ ಆರ್ಡರ್ ಹಾಗೂ ಎಸ್ಟಿಮೇಟ್ ನೋಡಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಲ್ಲದೆ ಗುತ್ತಿಗೆದಾರರಿಗೆ ಬಿಲ್ ಮಾಡದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಗಾವಡೆ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಸತೀಶ ಶಿವಾನಂದ ನಾಯ್ಕ , ರಾಜು ನಾಯ್ಕ ಇದ್ದರು.