ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಮಂಜುಗುಣಿ ಕಡಲತೀರದಲ್ಲಿ(Manjuguni Beach) ಮೀನುಗಾರರ ಸಹಾಯದಿಂದ ಅರಣ್ಯ ಇಲಾಖೆ(Forest Department) ಸಿಬ್ಬಂದಿಗಳು  ಆಲಿವ್ ರಿಡ್ಲಿ(Olive Ridle) ಜಾತಿಯ‌‌ ಕಡಲಾಮೆ ಮೊಟ್ಟೆ ಇಟ್ಟಿರುವ ಗೂಡನ್ನು ಗುರುತಿಸಿದ್ದಾರೆ.
2025ನೇ ಸಾಲಿನಲ್ಲಿ ಕಾರವಾರ ಅರಣ್ಯ ವಿಭಾಗ(Karwar Forest Division) ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಡಲಾಮೆ ಮೊಟ್ಟೆ ಗೂಡಾಗಿದೆ.  ಅನುಭವೀ ಸ್ಥಳೀಯ ಮೀನುಗಾರರು  ಪರಿಶೀಲಿಸಿ ಇದು ಕಡಲಾಮೆಯ ಮೊಟ್ಟೆ(Turtles Nestle) ಗೂಡು ಎಂಬುದನ್ನು ದೃಢಪಡಿಸಿದರು.  ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಅಗತ್ಯ ಕ್ರಮ ಕೈಗೊಂಡರು.

ಪತ್ತೆಯಾದ ಮೊಟ್ಟೆಗಳನ್ನು ಪತ್ತೆಯಾದ ಸ್ಥಳದಲ್ಲೇ ಇನ್‌ಸಿಟು ಕನ್ಸರ್ವೇಶನ್ ವಿಧಾನದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ ಇಡಲಾಗಿದೆ. ಮೊಟ್ಟೆ ಗೂಡಿನ ಸುತ್ತಲೂ ರಕ್ಷಣಾ ಬೇಲಿ ನಿರ್ಮಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿಯ ಮಾನವ ಹಸ್ತಕ್ಷೇಪ, ಶ್ವಾನಗಳು ಹಾಗೂ ಇತರೆ ಪ್ರಾಣಿಗಳಿಂದ ಹಾನಿಯಾಗದಂತೆ ನಿರಂತರವಾಗಿ ಅರಣ್ಯ ಇಲಾಖೆಯಿಂದ ನಿಗಾವಹಿಸಲಾಗುತ್ತಿದೆ. ಸುಮಾರು 45ರಿಂದ 55 ದಿನಗಳೊಳಗೆ ಮೊಟ್ಟೆಗಳಿಂದ ಮರಿಗಳು ಹೊರಬಂದು ಪುನಃ ಕಡಲಿಗೆ ಸೇರಿಸುವ ಕಾರ್ಯ ನಡೆಯಲಿದೆ.

ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಸಿ, ವಲಯ ಅರಣ್ಯಾಧಿಕಾರಿಗಳು ಪ್ರಮೋದ್ ಹಾಗೂ ಕಿರಣ್, ಕೋಸ್ಟಲ್ & ಮರೈನ್ ಇಕೋ–ಸಿಸ್ಟಮ್(Marine Eco System) ಘಟಕದ ಸಿಬ್ಬಂದಿಗಳು  ಪಾಲ್ಗೊಂಡಿದ್ದರು.

ಮೀನುಗಾರರಿಗೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆಗೆ ಪ್ರಮುಖ ಪಾತ್ರವಹಿಸಿದ ಸ್ಥಳೀಯ ಮೀನುಗಾರನಿಗೆ ಅರಣ್ಯ ಇಲಾಖೆಯ ವತಿಯಿಂದ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರೋತ್ಸಾಹ ಧನ ವಿತರಿಸಿದರು. ಕಡಲಾಮೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲೂ ಸಹಕಾರ ಅಗತ್ಯವೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರಾವಳಿಯಲ್ಲಿ ಕಂಡು ಬರುವ ಒಲಿವ್ ರಿಡ್ಲಿ ಕಡಲಾಮೆ(Olive Ridle  Turtle) ಅಪಾಯದಲ್ಲಿದ್ದು, ಕಡಲತೀರಗಳಲ್ಲಿ ಮೊಟ್ಟೆ ಇಡುವ ಕಾಲದಲ್ಲಿ ಸೂಕ್ತ ರಕ್ಷಣೆ ಬೇಕಾಗಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಪ್ರಯತ್ನದಿಂದ ಇಂತಹ ಗೂಡುಗಳನ್ನು ರಕ್ಷಿಸಿದರೆ, ಸಮುದ್ರ ಜೀವ ವೈವಿಧ್ಯ ಉಳಿವಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

ಇದನ್ನು ಓದಿ : ದೇವಿಯ ಮುಂದೆ ತಲೆ ಬಾಗಿದ ಕನಕಪುರ ಬಂಡೆ. ಇನ್ನೊಂದು ತಿಂಗಳಲ್ಲಿ ಬಾರೀ ಕುತೂಹಲ.

ಕಾರವಾರ ಕಡಲ ತೀರದಲ್ಲಿ ಅನುಮಾನಾಸ್ಪದ ಹಕ್ಕಿ. ಫಾರೆನ್ಸಿಕ್ ಪರೀಕ್ಷೆಗೆ ರವಾನೆಯಾದ ಡಿವೈಸ್.