ಕಾರವಾರ : ಹೊನ್ನಾವರ (Honnavar) ಮತ್ತು ಕುಮಟಾ (kumta) ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿದ ಬೆನ್ನಲ್ಲೇ ಭಟ್ಕಳ (BHATKAL) ತಾಲೂಕಿನ ಶಾಲಾ ಕಾಲೇಜಿಗೂ ಶುಕ್ರವಾರ ಜಿಲ್ಲಾಧಿಕಾರಿ ರಜೆ ವಿಸ್ತರಿಸಿದ್ದಾರೆ.
ಕರಾವಳಿಯ ಭಟ್ಕಳದಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದರಿಂದ ಡಿಸಿ ರಜೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಮುಂದೆ ಬೇರೆ ತಾಲೂಕುಗಳಲ್ಲಿ ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.