ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ  ನರ್ಸ್ ಗಳು ಬಟ್ಟೆ ಬದಲಿಸುತ್ತಿರೋದನ್ನ  ವಿಡಿಯೋ ರೆಕಾರ್ಡ್(Video Record) ಮಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿರುವ(Bangalore Nagarabavi) ಖಾಸಗಿ ಆಸ್ಪತ್ರೆಯಲ್ಲಿ(Private Hospital) ನಡೆದಿದೆ.

ಆಸ್ಪತ್ರೆಯ  ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ(Operation Theatre)  ಕೆಲಸ ಮಾಡುತ್ತಿದ್ದ ಸಿಬ್ಬಂದಿ , ಲೇಡಿ ನರ್ಸ್ ಗಳಿಗೆ(Lady Nurse) ಗೊತ್ತಾಗದಂತೆ ಅವರು  ಬಟ್ಟೆ ಬದಲಿಸುವಾಗ ವಿಡಿಯೋ ಮಾಡುತ್ತಿದ್ದ. ಇದನ್ನು ಗಮನಿಸಿದ ನರ್ಸ್, ಆಸ್ಪತ್ರೆಯ ವೈದ್ಯರಿಗೆ ದೂರು ನೀಡಿದ್ದರು. ಈ ಬಗ್ಗೆ  ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ (Annapoorneshwari  Town Station) ದೂರು ದಾಖಲಿಸಲಾಗಿತ್ತು

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯ ಸುಮಂತ್ ಮೊಹಂತಿ ಎಂಬಾತನನ್ನು ಬಂಧಿಸಿದ್ದಾರೆ. ಈತ ಕೊಠಡಿಯಲ್ಲಿ  ನರ್ಸ್ ಗಳ ಬಟ್ಟೆ ಬದಲಿಸುವಾಗ  ಮರೆಯಲ್ಲಿದ್ದ ವಸ್ತುವೊಂದನ್ನ ಇಟ್ಟಿದ್ದ  ಗಮನಿಸಿದ ನರ್ಸ್ ಒಬ್ಬರು  ರೆಕಾರ್ಡ್ ಮೊಡ್ ನಲ್ಲಿರುವ ಮೊಬೈಲ್ ‌ಆಗಿದ್ದರಿಂದ   ಪರಿಶೀಲಿಸಿದಾಗ ಅದರಲ್ಲಿ ವಿಡಿಯೋ ರೆಕಾರ್ಡ್ ಆಗುತ್ತಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳಿಗೆ ವಿಷಯ ತಿಳಿಸಿದ್ದರು.

ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳಾ ಸುರಕ್ಷತೆಗೆ ಧಕ್ಕೆ ತರುವಂತಹ ಆಘಾತಕಾರಿ ಘಟನೆಯಾಗಿದ್ದು  ಮೊಬೈಲ್ ಫೋನ್(Mobile Phone) ಅಡಗಿಸಿಟ್ಟು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ  ಆಸ್ಪತ್ರೆಯ ಪುರುಷ ಸಿಬ್ಬಂದಿಯನ್ನು  ಬಂಧಿಸಲಾಗಿದೆ.

ಬಂಧಿತ  ಆಸ್ಪತ್ರೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಹೇಳಲಾಗಿದ್ದು, ಈತ ಆಸ್ಪತ್ರೆಯ ನರ್ಸ್‌ಗಳು ಸಮವಸ್ತ್ರ ಧರಿಸಲು ಬಳಸುವ ‘ಚೇಂಜಿಂಗ್ ರೂಮ್’ನಲ್ಲಿ(Changing Room) ಯಾರಿಗೂ ತಿಳಿಯದಂತೆ ಮೊಬೈಲ್ ಫೋನ್ ಅನ್ನು ವಿಡಿಯೋ ಮೋಡ್‌ನಲ್ಲಿ ಆನ್ ಮಾಡಿ ಅಡಗಿಸಿಟ್ಟಿದ್ದ ಎನ್ನಲಾಗಿದೆ.

ದೂರು ದಾಖಲಿಸಿಕೊಂಡ   ಪೊಲೀಸರು, ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.  ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಈ ಹಿಂದೆ ಇಂತಹ ಎಷ್ಟು ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಮತ್ತು ಇದನ್ನು ಯಾರಿಗಾದರೂ ಕಳುಹಿಸಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಘಟನೆಯಿಂದ ಮುಜುಗರಕ್ಕೊಳಗಾದ  ಆಸ್ಪತ್ರೆಯ ಆಡಳಿತ ಮಂಡಳಿಯು, ಆರೋಪಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿದೆ(Suspended) ಎಂದು ಗೊತ್ತಾಗಿದೆ.  ಅಲ್ಲದೆ, ಆಸ್ಪತ್ರೆಯ ಆವರಣದಲ್ಲಿ ಮಹಿಳಾ ಸಿಬ್ಬಂದಿಗಳ ಸುರಕ್ಷತೆಗಾಗಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಹಾಗೂ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಇದನ್ನು ಓದಿ : ಚಿತ್ರದುರ್ಗ ದುರಂತದಲ್ಲಿ ಶಿರಾಲಿ ಮೂಲದ ಯುವತಿ‌ ನಾಪತ್ತೆ.

ಭೀಕರ ಅಪಘಾತ. ಗೋಕರ್ಣಕ್ಕೆ ಹೊರಟಿದ್ದ ಬಸ್ ಗೆ ಬೆಂಕಿ. 9 ಪ್ರಯಾಣಿಕರ ಸಜೀವ ದಹನ.

ಕಾರವಾರದಲ್ಲಿ ಹುಚ್ಚೆದ್ದು ಕುಣಿದ ಪ್ರೇಕ್ಷಕರು. ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್.