ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಕಡಲತೀರದಲ್ಲಿ ಹಾಕಿದ್ದ ಸೀನೆಮಾದ ಸೆಟ್(Cinema Effect) ಅಲೆಗಳ ಅಬ್ಬರಕ್ಕೆ(Waves Effect) ಕಡಲು ಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ(Kumta Taluku) ರಾಮನಗಿಂಡಿ(Ramanagindi) ಬಳಿ ನಡೆದಿದೆ.
ತೆಲುಗು ಸಿನಿಮಾವೊಂದಕ್ಕೆ(Telugu Cinema) ರಾಮನಗಿಂಡಿ ಬೀಚ್ನಲ್ಲಿ(Ranabagindi Beach) ಕಳೆದ ಮೇ ತಿಂಗಳಲ್ಲಿ ಐದಾರು ಎಕರೆ ಪ್ರದೇಶದಲ್ಲಿ ವಿಶಾಲವಾದ ಶೂಟಿಂಗ್ ಸೆಟ್ ಹಾಕಲಾಗಿತ್ತು ಇನ್ನೂ ಘೋಷಣೆಯಾಗದ ಬಹುಭಾಷಾ ಸಿನಿಮಾ. ಪ್ರಸಿದ್ದ ನಟ ಜೂನಿಯರ್ ಎನ್ಟಿಆರ್(Junior NTR) ಮತ್ತು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್(Director Prashanth Neel) ಅವರು ಕೊನೆಯ ಹಂತದ ಶೂಟಿಂಗ್ ಗೆ ಪ್ಲ್ಯಾನ್ ಮಾಡಿದ್ದರು. “ಡ್ರ್ಯಾಗನ್”(Dragon) ಎಂದು ಹೆಸರಿಸಲಾದ ಪ್ಯಾನ್ ವರ್ಲ್ಡ್ ಬಹುಕೋಟಿ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರದ ಕಲಾವಿಭಾಗವೂ ಹಳೆಯ ಬಂದರು ಮಾದರಿಯ(Old Bunder Model) ಬೃಹತ್ ಸೆಟ್ನ್ನು ಸಜ್ಜುಗೊಳಿಸಿತ್ತು. ಹಳೆಯ ಕಾಲದ ಬೋಟು(Old Boat), ಸಮುದ್ರ ಜಟ್ಟಿ(Sea Dock), ಬಂದರಿನ ಕಟ್ಟಡಗಳು, ಮನೆ, ಶೆಡ್, ಹಳೆಯ ಓಣಿಗಳು, ರೈಲು-ಹೆಲಿಕಾಪ್ಟರ್(Rail-Helecopter) ಮುಂತಾದ ಮಾದರಿಗಳನ್ನೂ ಮಾಡಲಾಗಿತ್ತು.
ಡ್ರ್ಯಾಗನ್ ಚಿತ್ರದ ಕ್ಲೆೈಮಾಕ್ಸ್ ಆ್ಯಕ್ಷನ್ ಹಾಗೂ ಹಾಡುಗಳಿಗೆ ಸಂಬಂಧಿಸಿದ ಚಿತ್ರೀಕರಣ(Shooting) ನಡೆಸಲಾಗುತ್ತಿದೆ ಎಂದು ಹೇಳಲಾಗಿತ್ತು. ಸುಮಾರು 15 ದಿನಗಳ ಕಾಲ ಚಿತ್ರೀಕರಣ ನಡೆಸುವ ವೇಳಾಪಟ್ಟಿಯಿದ್ದ ನಾಯಕ ಜೂ. ಎನ್ಟಿಆರ್(Junior NTR) ಅವರ ಅತ್ಯಂತ ಪ್ರಮುಖ ಭಾಗದ ಚಿತ್ರೀಕರಣ ಮೇ ತಿಂಗಳಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಮೇ ತಿಂಗಳಲ್ಲಿ ಮಳೆ(Rain) ಶುರುವಾಗಿದ್ದರಿಂದ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಮಳೆಗಾಲದ ನಂತರ ಬಾಕಿ ಇರುವ ಚಿತ್ರೀಕರಣ ಮುಗಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ವಾಯುಭಾರ ಕುಸಿತದಿಂದಾಗಿ (Cyclone) ಅಲೆಗಳ ಅಬ್ಬರ ಜಾಸ್ತಿಯಾಗಿ ಶೂಟಿಂಗ್ ಸೆಟ್ನ ಬಹುಭಾಗ ಹಾನಿಗೊಳಗಾಗಿದೆ. ಅನೇಕ ಸಾಮಗ್ರಿಗಳು ಸಮುದ್ರದ ಒಡಲು ಸೇರಿದೆ. ಕಬ್ಬಿಣದ ದೊಡ್ಡ ಗಾತ್ರದ ನಿರ್ಮಾಣವೊಂದು ಸಮುದ್ರದಲ್ಲಿ ಹೋಗಿದ್ದು ಮೀನುಗಾರರ ಬೋಟುಗಳಿಗೆ ಅಪಾಯಕಾರಿಯಾಗಬಹುದೆಂಬ ಆತಂಕವಿದೆ.
ಗಾಳಿಗೆ ಹಲವು ಭಾಗಗಳು ವಾಲಿ ನಿಂತಿದ್ದು ಯಾವಾಗ ಬೇಕಾದರೂ ಉರುಳುವ ಅಪಾಯವಿದೆ. ಸಿನಿಮಾ ಚಿತ್ರೀಕರಣ ಘಟಕವೂ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಪರಿಸರ, ಬಂದರು ಇಲಾಖೆ ಮುಂತಾದವುಗಳಿಂದ ಅನುಮತಿ ಪಡೆದಿರಬಹುದಾದರೂ ಶೂಟಿಂಗ್ ಸೆಟ್ ಮಳೆಗಾಲದ ಆರಂಭದಲ್ಲೇ ಸಾರ್ವಜನಿಕರಿಗೆ, ಸಮುದ್ರ ಹಾಗೂ ಪರಿಸರಕ್ಕೆ ಅಪಾಯಕಾರಿಯಾಗಿದೆ ಎಂದಾಗ ಸಿನಿಮಾ ಸೆಟ್ನ್ನು ಕೂಡಲೇ ತೆರವುಗೊಳಿಸಬೇಕಾಗಿತ್ತು.
ಆದರೆ ಪರಿಸ್ಥಿತಿ ಪಾಳುಬಿದ್ದ ನಗರದಂತಾಗಿದೆ. ಕಿಡಿಗೇಡಿಗಳು ಸೆಟ್ ಪ್ರದೇಶದೊಳಗೆ ಹೊಕ್ಕು ಬೆಲೆಬಾಳುವ ಹಾಗೂ ತಮಗೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದಾರೆ ಎನ್ನಲಾಗಿದೆ. ತಕ್ಷಣ ಸಂಪೂರ್ಣ ಶೂಟಿಂಗ್ ಸೆಟ್ ನ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರವುಗೊಳಿಸಬೇಕೆಂಬುದು ಸಾರ್ವನಿಕರು ಒತ್ತಾಯಿಸಿದ್ದಾರೆ.
ಇದನ್ನು ಓದಿ : ಭಟ್ಕಳ ತಾಲೂಕಾ ಮಡಿವಾಳ ಮಾಚಿದೇವ ಸಂಘ ಅಸ್ತಿತ್ವಕ್ಕೆ
ಮಕ್ಕಳನ್ನ ಒತ್ತೆಯಾಳಾಗಿಸಿಕೊಂಡ ಭೂಪ. ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಫಿನಿಶ್.
ಸ್ಟೇರಿಂಗ್ ತುಂಡಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್.
ಚಪಲ ಚೆನ್ನಿಗ ರಾಮಚಂದ್ರ ಎಸ್ಕೇಪ್. ಜಸ್ಟ್ ಮಿಸ್. ಉಪನ್ಯಾಸಕನಿಗೆ ಕಾರು ವ್ಯವಸ್ಥೆ ಮಾಡಿಸಿದ್ದ ಇಬ್ಬರು ವಶಕ್ಕೆ.
 
	 
						
 
 
 
							 
			 
			 
			 
			 
 
 

 
		 
			 
			 
			 
			