ಸಿದ್ದಾಪುರ (Siddapur): ತಾಲೂಕಿನ ಕೆಲವೆಡೆ ಭೂಮಿ ಕಂಪಿಸಿದ್ದರಿಂದ ಜನತೆ ಆತಂಕಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಸಿದ್ದಾಪುರ ತಾಲೂಕಿನ(Siddapura Taluku) ಹೆಗ್ಗರಣಿ, ಹೆರೂರು, ಗೋಳಿಮಕ್ಕಿ ಭಾಗದಲ್ಲಿ ಗುಡುಗಿನ ರೀತಿಯ ಸದ್ದಿನೊಂದಿಗೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ(Earthquake). ಸುಮಾರು 12 ಗಂಟೆ ವೇಳೆ ಶಬ್ದ ಕೇಳಿದಾಗ ಮನೆಯಲ್ಲಿದ್ದವರೆಲ್ಲ ಹೊರಗಡೆ ಓಡಿ ಬಂದಿದ್ದಾರೆ.
ಸೋಪಾ ಮೇಲೆ ಕುಳಿತ ಜನರಿಗೂ ಅಲುಗಾಡಿದ ಅನುಭವವಾಗಿದೆ. ತಗಡಿನ ಮನೆಯಲ್ಲಿ ಸ್ಪಷ್ಟವಾಗಿ ತಗಡಿನ ಶಬ್ದ ಕೇಳಿದೆ. ತಕ್ಷಣ ಹತ್ತಿರದ ಸಂಬಂಧಿಕರಿಗೆ ಕಾಲ್ ಮಾಡಿದಾಗಲೂ ತಮಗೆ ಅನುಭವವಾಗಿದೆ ಎಂದು ಸಿದ್ದಾಪುರದ ಹರಿಗಾರ ಗ್ರಾಮ ಚಂದ್ರಕಾಂತ ಗೌಡ ಹೇಳಿದ್ದಾರೆ.
ಶಿರಸಿ(Sirsi), ಯಲ್ಲಾಪುರ(Yallpura) ಭಾಗದಲ್ಲೂ ಭೂಮಿ ಕಂಪಿಸಿದೆ ಎಂದು ಸುದ್ದಿ ಹರಿದಾಡುತ್ತಿದೆ. ಹಿಂದೂ ಮಹಾಸಾಗರದ(Hindu Mahasagar) ನಡುವೆ ಸಹ ಮೂರು ಸೆಕೆಂಡ್ ಕಾಲ ಭೂಮಿ ನಡುಗಿದೆ ಎನ್ನಲಾಗಿದೆ.