ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ತುಮಕೂರು (Tumakuru) : ಮಧುಗಿರಿ ಉಪ ಕಾರಾಗೃಹದಿಂದ ಬಿಡುಗಡೆಗೊಂಡ ಡ್ರೋನ್ ಪ್ರತಾಪ್ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡ ಘಟನೆ ನಡೆದಿದೆ.
ತಾನು ಒಂದೇ ಒಂದು ಪ್ರಶ್ನೇ ಕೇಳ್ತೀನಿ. ದೇಶಾದ್ಯಂತ ನೂರಾರು ಎಕ್ಸ್ ಪೆರಿಮೆಂಟ್ ಪೋಸ್ಟ್ ಮಾಡಿದ್ದಾರೆ.. ಅವರನ್ನೇಲ್ಲಾ ಯಾಕೆ ಆರೆಸ್ಟ್ ಮಾಡಿಲ್ಲಾ, ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಹೊರದೇಶದಲ್ಲಿ,ನಮ್ಮ ದೇಶದಲ್ಲಾಗಬಹುದು. ಐಪಿಸಿ ದೇಶದಲೆಲ್ಲಾ ಒಂದೇ, ಕಾನೂನು ಎಲ್ರಿಗೂ ಒಂದೇ ಅಲ್ವಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಜಿಗಟ್ಟಲೇ ಸೋಡಿಯಂ ಉಪಯೋಗಿಸಿ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪೆರಿಮೆಂಟ್ ಮಾಡಿದ್ದಾರೆ. ಯಾರಾದ್ರು ಮೊಬೈಲ್ ಕೊಡಿ ಸರ್, ತೋರಿಸ್ತೀನಿ.. CRAZY XYZ,MISTER INDIAN HACKER ಯೂಟ್ಯೂಬರ್ ಮಾಡಿದ್ದಾರೆ. ಅದಕ್ಕೆಲ್ಲ ನಮ್ಮ ದೇಶದವರೇ ಜಾಸ್ತಿ ಜನ ಸಬ್ ಸ್ಕ್ರೈಬರ್ ಆಗಿರುವ ಯೂಟ್ಯೂಬ್ ಚಾನೆಲ್ ಗಳಾಗಿವೆ.
ಯಾರ ಮೇಲೂ ಕೇಸ್ ಆಗದೇ ಇರೋದು, ಪ್ರಶ್ನೆ ಮಾಡದೇ ಇರೋದು. ನನ್ನ ಮೇಲೆ ಏಕೆ ಅಂತಾ ನೀವೆ ಹುಡುಕಬೇಕು. ನಾನು ಸೈನ್ಸ್ ಅಂಡ್ ಎಜುಕೇಷನ್ ಉದ್ದೇಶಕ್ಕಾಗಿ ಮಾಡಿದ್ದೇನೆ. ಶಾಲಾ ಕಾಲೇಜುಗಳಲ್ಲಿ ಸೋಡಿಯಂ ಸುಲಭವಾಗಿ ಸಿಗೋ ಮೆಟಿರಿಯಲ್. ಅದಕ್ಕೆ ಎಕ್ಸ್‌ಪ್ಲೋಸಿವ್ ಅದು ಇದು ಅಂತಾ ಮಾಡೋ ಅಗತ್ಯ ಇರಲಿಲ್ಲ ಎಂದು ಕಿಡಿ ಕಾರಿದ್ದಾರೆ.
ನನಗಿಂತಾ ಮೊದಲೇ ಅವ್ರೆಲ್ಲಾ ಮಾಡಿದ್ದಾರೆ. ಐಪಿಸಿ ಅಂದರೇ ಇಂಡಿಯಾ ಪೂರ್ತಿ. ಬೇರೆಯವರ ಮೇಲೆ ಏನು ಆಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೇ ನನ್ನ ಟಾರ್ಗೆಟ್ ಮಾಡಿದ್ದಾರೆಂದು ಅಲ್ಲವೇ. ನನಗೆ ನ್ಯಾಯ ಬೇಕು ಎಂದು ಉಪಕಾರಾಗೃಹದ ಮುಂದೆ ಡ್ರೋನ್ ಪ್ರತಾಪ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ನಸುಕಿನ ಜಾವ ಸಕ್ಕರೆ ತುಂಬಿದ ಲಾರಿಗೆ ಬೆಂಕಿ.
ಮೈ, ಕೈ ಕಾಲುಗಳಲ್ಲಿ ಮದ್ಯ ಸಾಗಾಟ. ಇಬ್ಬರ ಬಂಧನ
ಇನ್ನೂ ಪತ್ತೆಯಾಗದ ಗಂಗಾವಳಿ ನದಿಯಲ್ಲಿ ಸಿಕ್ಕ ಎಲುಬಿನ ರಹಸ್ಯ.
I