ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ತಾಲೂಕಿನ ಬೆಂಗ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ನೇಹ ಬಂಧು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಿಂದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ”ಯನ್ನು ಆಯೋಜಿಸಲಾಗಿತ್ತು .
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಬೀನಾ ವೈದ್ಯ ಶಿಕ್ಷಣ ಸಂಸ್ಥೆ ಮುರುಡೇಶ್ವರ ಇದರ ವ್ಯವಸ್ಥಾಪಕ ನಿರ್ದೇಶಕಿ ಡಾ.ಪುಷ್ಪಲತಾ ಮಂಕಾಳ ವೈದ್ಯ ಅವರು ಮಾತನಾಡಿ, ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳುತ್ತಾ ಇದ್ದಾರೆ. ಮಹಿಳಾ ಒಕ್ಕೂಟಗಳು ಈ ದಿಶೆಯಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸುವುದರ ಮುಖಾಂತರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಹೇಮಾವತಿ ಮೊಗೇರ ಮಾತನಾಡಿ, ಮಹಿಳೆಯರ ಆರೋಗ್ಯ, ಮುಟ್ಟಿನ ನೈರ್ಮಲ್ಯ ವಯಕ್ತಿಕ ಸ್ವಚ್ಛತೆ , ಅನಿಮಿಯಾ ಕುರಿತು ಹಾಗೂ ಅದನ್ನು ಕಡಿಮೆಗೊಳಿಸಲು ತೆಗೆದುಕೊಳ್ಳುವ ಆಹಾರ ಕ್ರಮದ ಕುರಿತು ಮಾಹಿತಿ ನೀಡಿದರು.
ಬ್ಯಾಂಕ್ ಆಫ್ ಬರೋಡಾ ಶಿರಾಲಿ ಶಾಖೆಯ ವ್ಯವಸ್ಥಾಪಕ ಶ್ರೀನಿಧಿ ಅವರು ಬ್ಯಾಂಕ್ ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಗ್ರಾಮ ಆಡಳಿತಾಧಿಕಾರಿ ಲತಾ ನಾಯ್ಕ ರವರು ಗ್ರಾಮೀಣ ಭಾಗದ ಮಹಿಳೆಯರ ಸ್ಥಿತಿ ಗತಿಯ ಕುರಿತು ಮಾಹಿತಿ ನೀಡಿದರು, ಗ್ರಾಮ ಪಂಚಾಯತ್ ಬೆಂಗ್ರೆಯ ಪಿ.ಡಿ.ಓ ರಮೇಶ ನಾಯ್ಕ ಅವರು ಗ್ರಾಮ ಪಂಚಾಯತ್ ಮುಖಾಂತರ ಸಿಗುವ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಮೋಹಿನಿ ಮೊಗೇರ, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕಿ ಕುಮಾರಿ ಶಾಂತಿಕಾ ನಾಯಕ, ವಲಯ ಮೇಲ್ವಿಚಾರಕ ಗೋಪಾಲ ನಾಯ್ಕ, ವೆಂಕಟೇಶ ದೇವಡಿಗ, ದಿವ್ಯಾ ಶೆಟ್ಟಿ , ಉಷಾ ದೇವಡಿಗ, ಗೌತಮಿ ಬಾಗಲ್, ಒಕ್ಕೂಟದ ಸದಸ್ಯರು, ಸಿಬ್ಬಂದಿಗಳು, ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಂತರ ಮಹಿಳಾ ಸ್ವ – ಸಹಾಯ ಸಂಘಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೇಘನಾ ಕಾಜುಮನೆ ಸ್ವಾಗತಿಸಿದರು. ತನುಜಾ ನಾಯ್ಕ ವರದಿ ವಾಚಿಸಿದರು. ಜ್ಯೋತಿ ದೇವಡಿಗ ನಿರೂಪಿಸಿದರೆ ಭವಾನಿ ಮೊಗೇರ ವಂದಿಸಿದರು.
ಇದನ್ನು ಓದಿ : ಕಾಂಗ್ರೆಸ್ ಮುಖಂಡನ ಕೇಸ್. ಕೊಲೆಗೆ ಯತ್ನಿಸಿದವರು ಎಸ್ಕೇಪ್ ಆದ್ರು. ಸಾಥ್ ನೀಡಿದವರು ಸಿಕ್ಕಿ ಬಿದ್ರು.
ಗೃಹ ಸಚಿವರ ಆಪ್ತ, ಕಾಂಗ್ರೆಸ್ ಮುಖಂಡ ಅಂಕೋಲಾದ ಗೋಪಾಲಕೃಷ್ಣ ನಾಯಕ ಹತ್ಯೆಗೆ ಯತ್ನ.
