ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಧಾರವಾಡ(Dharwad) : ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ(Mukaleppa) ಹಾಗೂ ಆತನ ಪತ್ನಿ ಗಾಯತ್ರಿ(Gayatri), ತಮ್ಮ ಮದುವೆ ಸಂಬಂಧಿಸಿ ವ್ಯಾಪಕವಾದ ಆಪವಾದಗಳಿಗೆ ಪ್ರತ್ಯಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.
“ಲವ್ ಜಿಹಾದ್” ಆರೋಪದ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ ಅವರು, ತೀವ್ರವಾಗಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದಿದ್ದಾರೆ. “ನಾವು ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ನಾನು ನನ್ನ ಹುಟ್ಟಿದ ಧರ್ಮವನ್ನೇ ಪಾಲಿಸುತ್ತಿದ್ದೇನೆ. ನನ್ನ ಪತ್ನಿ ಗಾಯತ್ರಿಯೂ ತನ್ನ ಧರ್ಮವನ್ನೇ ಅನುಸರಿಸುತ್ತಾಳೆ. ಯಾರೂ ಮತಾಂತರವಾಗಿಲ್ಲ. ಇದನ್ನು ಲವ್ ಜಿಹಾದ್(Love Jihad) ಎಂಬುದು ತುಂಬಾ ನೋವುಂಟುಮಾಡುತ್ತಿದೆ. ನಾವು ಕಲಾವಿದರು, ಧರ್ಮ ಜಾತಿಯ ಹೆಸರಿನಲ್ಲಿ ಯಾರನ್ನೂ ಬೇಧಿಸುವ ಕೆಲಸ ಮಾಡಲ್ಲ ಎಂದು ಮುಕಳೆಪ್ಪ ಹೇಳಿದ್ದಾರೆ.
ಆತನ ಪತ್ನಿ ಗಾಯತ್ರಿಯೂ ಸಹ ಮಾತನಾಡಿ, “ನಾನು ಇಂದಿಗೂ ಹಿಂದೂ ಆಗೇ ಇದ್ದೇನೆ. ನನ್ನ ಪತಿ ನನಗೆ ಮತಾಂತರ ಮಾಡಿಲ್ಲ. ಇದೊಂದು ಸುಳ್ಳು ಸುದ್ದಿ. ಯಾರೂ ನಾವು ಮಾಡಿದ ಮದುವೆಯ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಾವು ಎರಡು ಮನಸುಗಳಿಂದ ಒಪ್ಪಿಕೊಂಡು ಮದುವೆ ಆಗಿದ್ದೇವೆ. ಯಾರೂ ನಮ್ಮ ಮೈಂಡ್ ವಾಶ್ ಮಾಡಿಲ್ಲ ಎಂದ ಗಾಯತ್ರಿ ಜಾಲಿಹಾಳ(Gayatri Jalihala), ಮೂರು ವರ್ಷಗಳ ಪ್ರೀತಿಯ ನಂತರ ಮದುವೆಯಾಗಿದ್ದೇವೆ. ತಮ್ಮ ಮೇಲೆ ಬರುತ್ತಿರುವ ಆರೋಪಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ನಮ್ಮನ್ನು ಬದುಕಲು ಬಿಡಿ. ಸುಳ್ಳು ಸುದ್ದಿಗಳಿಂದ ನಮ್ಮ ಬದುಕಿಗೆ ಕಿರಿಕಿರಿ ಮಾಡಬೇಡಿ,” ಎಂದು ಕೈ ಮುಗಿದು ಜನರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಗಾಂಜಾ ಸೇವನೆ. ಒಪ್ಪಿಕೊಂಡ ಯುವಕನ ಮೇಲೆ ಪ್ರಕರಣ.
ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ.
ಧರ್ಮಸ್ಥಳ ಪ್ರಕರಣ.ಮಹೇಶ ಶೆಟ್ಟಿ ತಿಮರೋಡಿ ಅಂತೂ ಗಡಿಪಾರು.