ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿದ್ದಾಪುರ(Siddapur) : ವ್ಯೂವ್ಸ್‌ಗಾಗಿ ಅಪಾಯಕಾರಿ ಸಾಹಸಕ್ಕೆ ಮುಂದಾದ ಯುಟ್ಯೂಬರ್ (Youtuber) ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ (Siddapur Police Station) ದೂರು ದಾಖಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೋಗ ಜಲಪಾತದ(Jogfalls) ರಾಜಾ ಪ್ಲೇಸ್ (ರಾಜಾ ಫಾಲ್ಸ್) ಬಳಿ ನಿರ್ಬಂಧಿತ ಕಲ್ಲುಬಂಡೆಯ(Rockstone) ಮೇಲೆ ನಿಂತು ವಿಡಿಯೋ ಚಿತ್ರೀಕರಣ(Video Shoot) ಮಾಡುತ್ತಿದ್ದ ಯುಟ್ಯೂಬರ್(Youtuber) ಮಸ್ತಿ ಇಳಿಸಲಾಗಿದೆ.
ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ(Teerthahalli) ತಾಲೂಕಿನ ಜೋಗನಕೊಪ್ಪ ಮೂಲದ ಯುಟ್ಯೂಬರ್ ಮೋಹನ ಶುಭಕರ ಗೌಡ (26) ಸೇರಿದಂತೆ ಆತನ ಜೊತೆಗಿದ್ದ ಭರತ ಗೌಡ (27) ಹಾಗೂ ಮದನ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಕಲ್ಲಿನ ತುದಿಯಲ್ಲಿ ನಿಂತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಯತ್ನಿಸಿದ್ದ ಆರೋಪ ಇವರ ಮೇಲಿದೆ. ಪ್ರವಾಸಿಗರ ಸುರಕ್ಷತೆಗಾಗಿ(Tourist Saftey) ನಿರ್ಬಂಧ ವಿಧಿಸಿದ್ದ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಚಿತ್ರೀಕರಣ ನಡೆಸಲಾಗಿದೆ ಎನ್ನಲಾಗಿದೆ.
ಈ ಸಂಬಂಧ ಸಿದ್ದಾಪುರ ಪೊಲೀಸರು(Siddapur Police) ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
